ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೆಕ್ಕಟ್ಟೆ: ಶಾಲಾ ವಾಹನ ಚಾಲಕನ‌ ನಿಯಂತ್ರಣ ತಪ್ಪಿ ಹೈಮಾಸ್ಟ್ ಕಂಬಕ್ಕೆ ಡಿಕ್ಕಿ- ಚಾಲಕ ಗಂಭೀರ

ತೆಕ್ಕಟ್ಟೆ: ಇಲ್ಲಿನ ತೆಕ್ಕಟ್ಟೆ ರಾ.ಹೆ.66ರ ಸರ್ಕಲ್ ನಲ್ಲಿ ಖಾಸಗಿ ಪಿಯು ಕಾಲೇಜಿನ ಶಾಲಾ ವಾಹನವೊಂದು ಚಾಲಕನ‌ ನಿಯಂತ್ರಣ ತಪ್ಪಿ ಹೈಮಾಸ್ಟ್ ಕಂಬಕ್ಕೆ ಡಿಕ್ಕಿಯಾಗಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಸಂಭವಿಸಿದೆ.

ಬ್ರಹ್ಮಾವರದಿಂದ ಹೆಮ್ಮಾಡಿ ಕಡೆಗೆ ಚಾಲಕ ಸಹಿತ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಪ್ರಯಾಣಿಸುತ್ತಿದ್ದ ಶಾಲಾ ವಾಹನಕ್ಕೆ ದ್ವಿಚಕ್ರ ವಾಹನವೊಂದು ಏಕಾಏಕಿ ಅಡ್ಡಬಂದ ಪರಿಣಾಮ ವಾಹನ ಚಾಲಕನ ನಿಯಂತ್ರಣ ತಪ್ಪಿ ಹೈಮಾಸ್ಟ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಘಟನೆಯ ತೀವ್ರತೆಗೆ ಬಸ್ ಚಾಲಕನ ತಲೆ, ಕಣ್ಣು ಹಾಗೂ ಕೈಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಇಬ್ಬರು ಕಾಲೇಜು ವಿದ್ಯಾರ್ಥಿನಿಯರಿಗೂ ಕೂಡಾ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಾಳುಗಳನ್ನು ಸ್ಥಳೀಯರು ತತ್‌ಕ್ಷಣವೇ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

19/09/2024 07:43 pm

Cinque Terre

844

Cinque Terre

0

ಸಂಬಂಧಿತ ಸುದ್ದಿ