ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ವಿಶ್ವಕರ್ಮ ಜಗದ್ಗುರುಗಳ ಸೀಮೋಲ್ಲಂಘನ- ಪುರ ಮೆರವಣಿಗೆ, ಧಾರ್ಮಿಕ ಸಭೆ

ಬ್ರಹ್ಮಾವರ: ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ಅರೆಮಾದನಹಳ್ಳಿ ಪೀಠಾಧೀಶ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರ 42ನೇ ಚಾತುರ್ಮಾಸ್ಯ ವ್ರತಾಚರಣೆ ಶಾಖಾ ಮಠ ಕಜ್ಕೆಯ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದಲ್ಲಿ 60 ದಿನಗಳ ಕಾಲ ಜರುಗಿ ಬುಧವಾರ ಸೀಮೋಲ್ಲಂಘನ ನಡೆಯಿತು.

ಚೇರ್ಕಾಡಿ ಬಳಿಯ ಸೀತಾನದಿಯ ಮಡಿಸಾಲಿನಲ್ಲಿ ಗಂಗಾ ಪೂಜೆ ಬಾಗಿನ ಸಮರ್ಪಣೆ ಜರುಗಿತು. ಬಳಿಕ ಚೇರ್ಕಾಡಿ, ಬೆಳ್ಳಂಪಳ್ಳಿ, ಹಾವಂಜೆ, ಕುಕ್ಕೆಹಳ್ಳಿ ಭಾಗದ ವಿಶ್ವಕರ್ಮ ಸಮಾಜ ಬಾಂಧವರಿಂದ ತೆರೆದ ವಾಹನದಲ್ಲಿ ಪುರ ಮೆರವಣಿಗೆಯಲ್ಲಿ ಸಾಗಿ ಬಂದು ಕನ್ನಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಧಾರ್ಮಿಕ ಸಭೆ ನಡೆಯಿತು.

ಈ ಸಂದರ್ಭ ಶ್ರೀಗಳು ಮಾತನಾಡಿ, ಮಕ್ಕಳಿಗೆ ದೇವರ ಹೆಸರನ್ನು ಇಡುವ ಸಂಪ್ರದಾಯ ಸನಾತನ ಧರ್ಮದಲ್ಲಿ ಮಾಯವಾಗಿದ್ದು, ಮುಂದಿನ ದಿನದಲ್ಲಿ ದೇವರ ಹೆಸರೇ ಇಲ್ಲದಂತಾಗುವ ಆತಂಕ ಎದುರಾಗಿದೆ. ಧರ್ಮ ಸಂಸ್ಕೃತಿಯ ಜಾಗೃತಿ ಎಲ್ಲಾ ಭಾಗದಿಂದಲೂ ನಡೆಯಬೇಕಾಗಿದೆ ಎಂದರು.

ಚೇರ್ಕಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ನಾರಾಯಣ ನಾಯ್ಕ್, ಧನಂಜಯ್ ಅಮೀನ್, ಹರೀಶ್ ಶೆಟ್ಟಿ ಚೇರ್ಕಾಡಿ, ಕಮಲಾಕ್ಷ ಹೆಬ್ಬಾರ್, ರಾಧಾಕೃಷ್ಣ, ಸಾಮಂತ ಕೃಷ್ಣ ಮಡಿವಾಳ, ಶೇಖರ ಕುಲಾಲ್, ಸುರೇಶ್ ಪೂಜಾರಿ, ಕಜ್ಕೆ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Edited By : Nagesh Gaonkar
PublicNext

PublicNext

19/09/2024 04:10 pm

Cinque Terre

10.54 K

Cinque Terre

0

ಸಂಬಂಧಿತ ಸುದ್ದಿ