ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿ: 'ಮಕ್ಕಳಿಗೆ ಮಾದಕ ದ್ರವ್ಯ ದುಷ್ಪಾರಿಣಾಮದ ಅರಿವು ಮೂಡಿಸುವುದು ಅಗತ್ಯ'

ಮುಲ್ಕಿ: ಭಾರತದ ಕಾನೂನು ನೆರವು ಕೇಂದ್ರ ಹಳೆಯಂಗಡಿ ಹಾಗೂ ವಿಜಯ ಮಾಸ್ಟರ್ ಟ್ರಸ್ಟ್, ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟದ ಸಹಯೋಗದಲ್ಲಿ ಮಾದಕ ದ್ರವ್ಯ ವ್ಯಸನ ವಿರೋಧಿ ದಿನ ಹಾಗೂ ಕಾನೂನು ಮಾಹಿತಿ ಶಿಬಿರ ಹಳೆಯಂಗಡಿಯ ಯೋಗ ಮಂದಿರದಲ್ಲಿ

ನಡೆಯಿತು.

ಸಿ ಎಸ್ ಐ ವಿಶ್ರಾಂತ ಸಭಾ ಪಾಲಕ ರೆವೆ. ಐಸನ್ ಪಾಲನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಾದಕ ದ್ರವ್ಯಗಳಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುವ ಜತೆಗೆ ಮಾನಸಿಕ ಖಿನ್ನತೆ ಒಳಪಡುತ್ತಿದ್ದು, ಜನರಲ್ಲಿ ಅರಿವು ಮೂಡಿಸಿ ದುಶ್ಚಟಗಳ ಬಗ್ಗೆ ತಿಳುವಳಿಕೆ ನೀಡಬೇಕಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಭಾರತದ ಕಾನೂನು ನೆರವು ಕೇಂದ್ರದ ಅಧ್ಯಕ್ಷ ಡೇನಿಯಲ್ ದೇವರಾಜ್ ವಹಿಸಿದ್ದರು

ಮುಖ್ಯ ಅತಿಥಿಗಳಾಗಿಸಿ.ಎಸ್.ಐ ಚರ್ಚು ಬೊಲ್ಮದ ಸಭಾ ಪಾಲಕ ವಿನಯಲಾಲ್ ಬಂಗೇರಾ ಮುಲ್ಕಿ ಸಿಎಸ್ಐ ಯೂನಿಟಿ ಚರ್ಚ್ ನ ಸಭಾ ಪಾಲಕ ಸ್ಟೀವನ್ ಸರ್ವೋತ್ತಮ ಪಾಸ್ಟರ್ ರಾಜೇಶ್ ಕೋಟ್ಯಾನ್, ಸಮಾಜ ಸೇವಕಿ, ನ್ಯಾನ್ಸಿ ಕರ್ಕಡ, ಪ್ರತಿಭಾ ಕ್ರಿಸ್ತಬೆಲ್ ಪಾಲನ್ನ. ಮತ್ತಿತರರು ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಮಂಜುನಾಥ್ ಗದಗ, ಮನೋವೈದ್ಯ ಡಾ. ಮಿಥುನ್ ವಕೀಲ ರಾಮಕೃಷ್ಣ ಭಟ್, ಹರಿಣಿ ಬಂಗೇರಾ ರವರು ಮಾದಕ ದ್ರವ್ಯ ಕಾನೂನು ಬಗ್ಗೆ ಮಾಹಿತಿ ನೀಡಿದರು.

Edited By : PublicNext Desk
Kshetra Samachara

Kshetra Samachara

18/09/2024 03:43 pm

Cinque Terre

1.02 K

Cinque Terre

0

ಸಂಬಂಧಿತ ಸುದ್ದಿ