ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಫೈನಲ್‌ನಲ್ಲಿ ಭಾರತಕ್ಕೆ ಗೆಲುವು - ಚೀನಾಕ್ಕೆ ಬೆಂಬಲಿಸಿ ಟ್ರೋಲ್ ಆದ ಪಾಕಿಸ್ತಾನ

ಹುಲುನ್‌ಬುಯಿರ್ (ಚೀನಾ): ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಆತಿಥೇಯ ಚೀನಾ ವಿರುದ್ಧ ಹೋರಾಡಿ 1–0 ಗೋಲುಗಳಿಂದ ಭಾರತ ತಂಡವು ಗೆಲುವು ಸಾಧಿಸಿದೆ. ಭಾರತ ಐದನೇ ಸಲ ಈ ಪ್ರಶಸ್ತಿ ಗೆದ್ದುಕೊಂಡಿದೆ. ಆದರೆ ಈ ಪಂದ್ಯದಲ್ಲಿ ಪಾಕಿಸ್ತಾನ ಹಾಕಿ ತಂಡದ ಆಟಗಾರರು ಟ್ರೋಲ್‌ಗೆ ಆಗಿದ್ದಾರೆ.

ಹೌದು. ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಫೈನಲ್‌ನಲ್ಲಿ ಪಾಕಿಸ್ತಾನ ಹಾಕಿ ಆಟಗಾರರು ಚೀನಾವನ್ನು ಬೆಂಬಲಿಸಿದ್ದರು. ಪಾಕ್ ಆಟಗಾರರು ಚೀನಾದ ಧ್ವಜ ಹಿಡಿದು ಕುಳಿದಿದ್ದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಪಾಕಿಸ್ತಾನ ತನ್ನ ಸೆಮಿಫೈನಲ್‌ನಲ್ಲಿ ಚೀನಾ ವಿರುದ್ಧ ಸೋಲು ಕಂಡು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇಂದು ನಡೆದ ಫೈನಲ್ ಪಂದ್ಯದಲ್ಲಿ ಕಾಣಿಸಿಕೊಂಡ ಪಾಕಿಸ್ತಾನದ ಹಾಕಿ ಆಟಗಾರರು ಚೀನಾ ಧ್ವಜ ಹಿಡಿದು ಕುಳಿತಿದ್ದರು. ಆದರೆ ಚೀನಾ ಸೋಲು ಕಾಣುತ್ತಿದ್ದಂತೆ ಪಾಕ್‌ ಟ್ರೋಲ್‌ಗೆ ಸಿಲುಕಿದೆ.

ವೈರಲ್ ಆಗಿರುವ ಫೋಟೋಗೆ ಕಮೆಂಟ್ ಮಾಡಿರುವ ನೆಟ್ಟಿಗರೊಬ್ಬರು, "ಇದು ಪಾಕಿಸ್ತಾನಕ್ಕೆ ದುಃಖದ ಕ್ಷಣ" ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು, "ಅವರು ತಮ್ಮ ಪ್ರಾಯೋಜಕರನ್ನು ಬೆಂಬಲಿಸುತ್ತಿದ್ದಾರೆ" ಎಂದು ಕಾಲೆಳೆದಿದ್ದಾರೆ.

Edited By : Vijay Kumar
PublicNext

PublicNext

17/09/2024 11:04 pm

Cinque Terre

52.28 K

Cinque Terre

4

ಸಂಬಂಧಿತ ಸುದ್ದಿ