ಚೆನ್ನೈ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಚೆನ್ನೈ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಭಾರತವು 6 ವಿಕೆಟ್ ಕಳೆದುಕೊಂಡು 339 ರನ್ ಗಳಿಸಿದೆ.
ಒಂದು ಸಮಯದಲ್ಲಿ ಟೀಂ ಇಂಡಿಯಾ 144 ರನ್ಗಳಿಗೆ ಪ್ರಮುಖ 6 ವಿಕೆಟ್ ಕಳೆದುಕೊಂಡಿತ್ತು. ಆದರೆ ಇಲ್ಲಿಂದ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ 195 ರನ್ಗಳ ಅಜೇಯ ಜೊತೆಯಾಟ ನಡೆಸಿದರು. ಅಶ್ವಿನ್ ತವರು ನೆಲದಲ್ಲಿ ಶತಕ ಗಳಿಸಿದರೆ, ಜಡೇಜಾ 86 ರನ್ ಗಳಿಸಿ ಔಟಾಗದೆ ಉಳಿದರು.
ಮೊದಲ ದಿನ ಭಾರತದ ಪರ ಯಶಸ್ವಿ ಜೈಸ್ವಾಲ್ 56 ರನ್, ರಿಷಬ್ ಪಂತ್ 39 ರನ್ ಮತ್ತು ಕೆಎಲ್ ರಾಹುಲ್ 16 ರನ್ ಗಳಿಸಿದರು. ರೋಹಿತ್ ಶರ್ಮಾ ಮತ್ತು ವಿರಾಟ್ ತಲಾ 6 ರನ್ ಗಳಿಸಿ ಔಟಾದರೆ, ಶುಭ್ಮನ್ ಗಿಲ್ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಬಾಂಗ್ಲಾದೇಶ ಪರ ಹಸನ್ ಮಹಮೂದ್ 4 ವಿಕೆಟ್ ಪಡೆದರು. ಮೆಹದಿ ಹಸನ್ ಮಿರಜ್ ಮತ್ತು ನಹಿದ್ ರಾಣಾ ತಲಾ 1 ವಿಕೆಟ್ ಪಡೆದುಕೊಂಡರು.
ಎರಡನೇ ದಿನದ ಆಟ ನಾಳೆ ಬೆಳಗ್ಗೆ 9:30ಕ್ಕೆ ಆರಂಭವಾಗಲಿದೆ.
PublicNext
19/09/2024 05:14 pm