ಬ್ರಿಡ್ಜ್ಟೌನ್: ಬಾರ್ಬಡೋಸ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಅಂತಾರಾಷ್ಟ್ರೀಯ ಪಂದ್ಯದ ವೇಳೆ ಫೀಲ್ಡಿಂಗ್ ವಿಚಾರಕ್ಕೆ ವೆಸ್ಟ್ ಇಂಡೀಸ್ ಕ್ಯಾಪ್ಟನ್ ಶಾಯ್ ಹೋಪ್ ಅವರೊಂದಿಗಿನ ಭಿನ್ನಾಭಿಪ್ರಾಯಕ್ಕಾಗಿ ತಂಡದ ಸ್ಟಾರ್ ಬೌಲರ್ ಅಲ್ಜಾರಿ ಜೋಸೆಫ್ ಅವರನ್ನು ಇದೀಗ ಕೆರಿಬಿಯನ್ ಕ್ರಿಕೆಟ್ ಮ್ಯಾನೇಜ್ಮೆಂಟ್ ತಂಡದಿಂದ ಬ್ಯಾನ್ ಮಾಡಿದೆ.
ಬುಧವಾರ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬೌಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ, ಮೈದಾನದಲ್ಲೇ ಟೀಮ್ ಕ್ಯಾಪ್ಟನ್ ಶಾಯ್ ಅವರೊಂದಿಗೆ ಜೋಸೆಫ್ ವಾಗ್ವಾದಕ್ಕಿಳಿದರು. ಕೆಲಕಾಲ ತೀವ್ರ ಜಟಾಪಟಿ ನಡೆಸಿದ ಅವರಿಗೆ ಅಂಪೈರ್ ಸಮಾಧಾನ ಹೇಳುವ ಪ್ರಯತ್ನ ಮಾಡಿದ್ದೇ ಆದರೂ ಅಲ್ಜಾರಿ ಮಾತ್ರ ಮಾತಿಗೆ ಲಗಾಮು ಹಾಕಲಿಲ್ಲ. ಇದು ಕ್ರಿಕೆಟ್ ಪ್ರಿಯರಲ್ಲಿ ಭಾರೀ ಗೊಂದಲ ಮೂಡಿಸಿತ್ತು.
'ಅಲ್ಜಾರಿ ಅವರ ಈ ರೀತಿಯ ನಡವಳಿಕೆ ಸರಿಯಲ್ಲ, ಇದು ತಪ್ಪು. ಅದಕ್ಕೆ ಸೂಕ್ತ ಕ್ರಮವನ್ನು ನಾವು ಜರುಗಿಸಲೇಬೇಕು. ಹೀಗಾಗಿ ಸದ್ಯ ಇಂಗ್ಲೆಂಡ್ ವಿರುದ್ಧ ಸರಣಿಯ ಎರಡು ಪಂದ್ಯಗಳಿಂದ ವೇಗಿ ಅಲ್ಜಾರಿ ಜೋಸೆಫ್ ಅವರನ್ನು ಅಮಾನತುಗೊಳಿಸಿದ್ದೇವೆ” ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್‌ನ ನಿರ್ದೇಶಕ ಮೈಲ್ಸ್ ಬಾಸ್ಕೊಂಬೆ ತಿಳಿಸಿದ್ದಾರೆ.
PublicNext
08/11/2024 12:37 pm