ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಣ್ಣಾಗಿ ಬದಲಾದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಮಗ ಆರ್ಯನ್, ಕ್ರಿಕೆಟ್‌ ಗೆ ಅಡಚಣೆಯಾದ ಲಿಂಗ ಬದಲಾವಣೆ

ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಮಗ ಆರ್ಯನ್ ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿಗೆ ಒಳಗಾಗಿ ಇದೀಗ ಅನಯಾ ಆಗಿ ಬದಲಾಗಿದ್ದಾರೆ. ಅಯನಾ ಭಾನುವಾರ, ತನ್ನ 10 ತಿಂಗಳ ಹಾರ್ಮೋನ್ ರೂಪಾಂತರದ ಪ್ರಯಾಣವನ್ನು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.ವೃತ್ತಿಪರ ಕ್ರಿಕೆಟಿಗರಾಗುವ ಪ್ರಯಾಣವು ಸವಾಲುಗಳು ಮತ್ತು ತ್ಯಾಗಗಳಿಂದ ತುಂಬಿರುವ ಹಾಗೆ ನಾನು ಯಾರೆಂದು ಕಂಡುಕೊಳ್ಳುವ ಪ್ರಯಾಣವು ಅಷ್ಟೇ ಸವಾಲಗಿದ್ದವು.ಆದರೂ ಆ ಪಯಣದಲ್ಲಿ ತಾನು ಯಶ ಕಂಡಿದ್ದಕ್ಕಾಗಿ ಹೆಮ್ಮೆ ಪಡುತ್ತೇನೆ ಅದು ಎಲ್ಲದಕ್ಕಿಂತ ದೊಡ್ಡ ಜಯ ಎಂದು ಬರೆದುಕೊಂಡಿದ್ದಾರೆ.

23 ವರ್ಷದ ಅಥ್ಲೀಟ್ ಮತ್ತು ಕ್ರಿಕೆಟಿಗ ಅನಾಯಳಿಗೆʻ ತನ್ನ ತಂದೆಯಂತೆ ಕ್ರಿಕೆಟ್‌ ಅಚ್ಚುಮೆಚ್ಚು.ಆದರೆ ಈಗ ಟ್ರಾನ್ಸ್‌ವುಮನ್ ಆಗಿ ಬದಲಾಗಿರುವುದರಿಂದ ವೃತ್ತಿಜೀವನವನ್ನು ಮುಂದುವರಿಸಲು ಇದು ಅಡ್ಡಿಯಾಗುತ್ತಿದೆ.ಕ್ರಿಕೆಟೀನ ಮೇಲಿನ ಆಸಕ್ತಿಯನ್ನು ಮುಂದುವರಿಸುವುದಾ? ಅಥವಾ ತನ್ನ ತನವನ್ನು ಅನುಸರಿಸುವುದಾ? ಎಂಬ ಟಗ್‌ ಆಫ್‌ ವಾರ್‌ ನಡುವೆ. ಹನ್ನೊಂದು ತಿಂಗಳ ಹಾರ್ಮೋನ್ ಟ್ರಾನ್ಸ್‌ಫಾರ್ಮೇಷನ್ ಥೆರಪಿ ಒಳಗಾಗಿ ನಾನು ನಾನಗಿಯೇ ಬದುಕಬೇಕೆಂದು ಕಂಡುಕೊಂಡಿದ್ದಾರೆ.

ಏನಿದು ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ ಅಂತೀರಾ? ಲಿಂಗ,ಋತುಬಂಧ, ಥೈರಾಯ್ಡ್ ಸಮಸ್ಯೆಗಳು,ಹಾರ್ಮೋನ್ ಸಮಸ್ಯೆಗಳು ಉಂಟಾದಾಗ ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ ಮಾಡಲಾಗುವುದು,ದೇಹವು ಹಾರ್ಮೋನುಗಳನ್ನು ಸಾಕಷ್ಟು ಉತ್ಪಾದಿಸದಿದ್ದಾಗ ಅವುಗಳನ್ನು ಬದಲಾಯಿಸುವ ಚಿಕಿತ್ಸೆ ಇದಾಗಿದೆ.

Edited By : Somashekar
PublicNext

PublicNext

12/11/2024 07:49 pm

Cinque Terre

67.78 K

Cinque Terre

2

ಸಂಬಂಧಿತ ಸುದ್ದಿ