ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಪ್ರಧಾನಿ ಮೋದಿ ಹುಟ್ಟು ಹಬ್ಬದ ಪ್ರಯುಕ್ತ ಉಚಿತ ರಿಕ್ಷಾ ಪ್ರಯಾಣ

ಕಾಪು: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಕಾಪು ಪುರಸಭೆ ವ್ಯಾಪ್ತಿಯ 5 ಕಿಲೋ ಮೀಟರ್ ವ್ಯಾಪ್ತಿಯೊಳಗೆ ಕಾಪು ಪುರಸಭಾ ಮಾಜಿ ಸದಸ್ಯ ಚಂದ್ರ ಮಲ್ಲಾರು ಸತತ ಒಂಬತ್ತನೇ ವರ್ಷದಲ್ಲಿ ಉಚಿತ ರಿಕ್ಷಾ ಪ್ರಯಾಣ ನಡೆಸುವ ಮೂಲಕ ಸುದ್ದಿಯಾಗಿದ್ದಾರೆ.

ಇಂದು ಬೆಳಿಗ್ಗೆ ಕೇಕ್ ಕತ್ತರಿಸಿ ಸಿಹಿ ತಿಂಡಿ ಹಂಚಿ ತನ್ನ ರಿಕ್ಷಾದಲ್ಲಿ ಮುಂಜಾನೆ 9 ಗಂಟೆಯಿಂದ ಸಂಜೆ 6ಗಂಟೆಯವರೆಗೆ ಸಾರ್ವಜನಿಕರಿಗೆ ಉಚಿತ ಸೇವೆ ನೀಡುವ ಮೂಲಕ ಮೋದಿ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿದರು.

ಈ ಸಂದರ್ಭ ಕಾಪು ಆಟೋರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘದ ಅಧ್ಯಕ್ಷ ಶೈಲೇಶ್ ಅಮೀನ್, ಪದಾಧಿಕಾರಿಗಳಾದ ಶೇಖ್ ನಜೀರ್ , ಮಹಮ್ಮದ್ ಆಲಿ, ಗೋಪಾಲ್ ನಾಯಕ್ ಪ್ರವೀಣ್, ವಿಠಲ್, ಇಲಿಯಾಸ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

17/09/2024 10:44 pm

Cinque Terre

6.98 K

Cinque Terre

0

ಸಂಬಂಧಿತ ಸುದ್ದಿ