ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: 168.12 ಕೋಟಿ ರೂ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಶೀಘ್ರ ಕಾರ್ಯರೂಪಕ್ಕೆ - ಉಮಾನಾಥ್ ಕೋಟ್ಯಾನ್

ಮುಲ್ಕಿ: ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಕಿನ್ನಿಗೋಳಿ, ಬಜಪೆ ಮತ್ತು ಮೂಲ್ಕಿ ಪಟ್ಟಣ ಪಂಚಾಯತ್‌ಗೆ 168.12 ಕೋಟಿ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಭವಿಷ್ಯದ ಯೋಜನೆ ಯೋಜನೆಯಲ್ಲಿ ಕೇಂದ್ರ ಸರಕಾರದ ಅಮೃತ 2.0 ಯೋಜನೆಯಲ್ಲಿ ಈ ನೀರಿನ‌ ಘಟಕ ಕಾರ್ಯರೂಪಕ್ಕೆ ಬರಲಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಅವರು ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನ ಮೂರು ಕಾವೇರಿ ಬಳಿ ಅಮೃತ 2.0 ಯೋಜನೆಯ ನೀರಿನ ಘಟಕಕ್ಕೆ ಚಾಲನೆ ನೀಡಿ‌ ಮಾತನಾಡಿ, ಗುರುಪುರ ನದಿಯಲ್ಲಿ ಜಾಕ್ ವೆಲ್ ನಿರ್ಮಿಸಿ ಅಲ್ಲೇ ಶುದ್ದಿಕರಣ ಘಟಕ ಸ್ಥಾಪಿಸಿ ಬಜಪೆ, ಕಿನ್ನಿಗೊಳಿ ಮತ್ತು ಮೂಲ್ಕಿಗೆ ನೀರು ಸರಬರಾಜು‌ ಮಾಡಲಾಗುತ್ತದೆ ಇದಕ್ಕಾಗಿ ಕೆಲವು ಕಡೆ ಟ್ಯಾಕ್ ನಿರ್ಮಿಸಲಾಗುತ್ತದೆ. ಮುಂದಿನ 30 ವರ್ಷಗಳ ಅವದಿವರೆಗೆ ನೀರಿನ ಯಾವುದೇ ಕೊರತೆ ಆಗಬಾರದು ಎಂಬ ದೃಷ್ಟಿಯಿಂದ ಈ ಯೋಜನೆ ರೂಪಿಸಲಾಗುತ್ತಿದೆ ಎಂದರು.

ಈ ಸಂದರ್ಭ ಬಿಜೆಪಿ ನಾಯಕರಾದ ಭುವನಾಭಿರಾಮ ಉಡುಪ, ಈಶ್ವರ್ ಕಟೀಲ್, ಸತೀಶ್ ಅಂಚನ್, ಅಭಿಲಾಷ್ ಶೆಟ್ಟಿ ಕಟೀಲ್, ಸರೋಜಿನಿ ಗುಜರನ್, ಬೇಬಿ‌ ಕೆಮ್ಮಡೆ, ಸಂಜಯ್ ಮೂರುಕಾವೇರಿ, ತಾರನಾಥ ಶೆಟ್ಟಿ,ಸುಭಾಷ್ ಶೆಟ್ಟಿ, ಅರುಣ್ ಮಲ್ಲಿಗೆಯಂಗಡಿ, ಯತೀಶ್, ಅಸಿಸ್ಟ್ಂಟ್ ಇಂಜಿನೀಯರ್ ಶೋಭಾ ಲಕ್ಷ್ಮೀ ಗುತ್ತಿಗೆದಾರರಾದ ನಂದ ಮತ್ತಿತರರು ಉಪಸ್ಥಿತರಿದ್ದರು.

Edited By : Vinayak Patil
PublicNext

PublicNext

17/09/2024 05:53 pm

Cinque Terre

30.26 K

Cinque Terre

0

ಸಂಬಂಧಿತ ಸುದ್ದಿ