ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸವಾಗಬೇಕು

ನವಲಗುಂದ: ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಮುಖ್ಯ ಅಥಿತಿಗಳಾಗಿ ಮಾತನಾಡಿದ ಖ್ಯಾತ ಸಾಹಿತಿಗಳು ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ ಸುಗುಣ ಡಿ ವಿ ಅವರು ಸಮಾಜದಲ್ಲಿ ಸಮಾನತೆ, ಸ್ವಾತಂತ್ರ್ಯ, ಸಹೋದರತೆ ಮೌಲ್ಯಗಳು ಪ್ರಜಾಪ್ರಭುತ್ವದಂತ ರಾಜಕೀಯ ವ್ಯವಸ್ಥೆ ಮೂಲಕ ಮಾತ್ರ ಸಾಕರಗೊಳ್ಳಲು ಸಾಧ್ಯ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ. ಎಂ ಬಿ ಬಾಗಡಿ ಮಾತನಾಡುತ್ತಾ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ರವರ ಸಾಧನೆಗಳನ್ನು ನೆನೆದು ಸಂವಿಧಾನಾತ್ಮಕ ಅಂಶಗಳನ್ನು ಪಾಲಿಸಲು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.

ಸಂವಿಧಾನ ಪೀಠಿಕೆಯನ್ನು ಡಾ ಸಂತೋಷ ಹುಬ್ಬಳ್ಳಿ ವಾಚಿಸಿದರು. ಸ್ವಾಗತ ಭಾಷಣವನ್ನು ವಿನಾಯಕ ಮಿರಜಕರ ಮಾಡಿದರು, ಬಸವರಾಜ ಸೂಡಿ ಇವರು ಮಾನವ ಸರಪಣಿಯ ನೇತೃತ್ವ ವಹಿಸಿದ್ದರು. ಡಾ ನಾಗರತ್ನ ಕುರಡೇಕರ್ ಇವರು ವಂದನಾರ್ಪಣೆ ಮಾಡಿದರು. ಹಾಗೂ ಸವಿತಾ ಚಿಕ್ಕಣ್ಣವರ ಕಾರ್ಯಕ್ರಮದ ನಿರೂಪಣೆ ಮಾಡಿದರು.

Edited By : PublicNext Desk
Kshetra Samachara

Kshetra Samachara

15/09/2024 03:10 pm

Cinque Terre

6.54 K

Cinque Terre

0

ಸಂಬಂಧಿತ ಸುದ್ದಿ