ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 77ನೇ ಹಿರಿಯರ ರಾಷ್ಟ್ರೀಯ ಈಜು- ಆತಿಥೇಯ ಕರ್ನಾಟಕಕ್ಕೆ ಸಮಗ್ರ ಚಾಂಪಿಯನ್ ಪಟ್ಟ

ಮಂಗಳೂರು: ನಗರದ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜು ಕಾಂಪ್ಲೆಕ್ಸ್‌ನಲ್ಲಿ 77ನೇ ರಾಷ್ಟ್ರೀಯ ಮಟ್ಟದ ಈಜು ಚಾಂಪಿಯನ್‌ಷಿಪ್‌ ಮುಕ್ತಾಯಗೊಂಡಿದೆ. 28 ರಾಜ್ಯಗಳ 450ಕ್ಕೂ ಅಧಿಕ ಈಜುಪಟುಗಳು ‌ಭಾಗಿಯಾಗಿದ್ದು, ಆತಿಥೇಯ ಕರ್ನಾಟಕ ತಂಡ ಚಾಂಪಿಯನ್‌ಷಿಪ್‌‌ನ ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಕರ್ನಾಟಕ ತಂಡ ಒಟ್ಟು 274 ಅಂಕ ಗಳೊಂದಿಗೆ ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಈ ಮೂಲಕ 17 ಚಿನ್ನ, 12 ಬೆಳ್ಳಿ ಹಾಗೂ 4 ಕಂಚು ಸಹಿತ ಒಟ್ಟು 33 ಪದಕಗಳನ್ನು ಗಳಿಸಿತು. ಮಹಾರಾಷ್ಟ್ರ 167ಅಂಕ(3 ಚಿನ್ನ, 11 ಬೆಳ್ಳಿ, 8 ಕಂಚು ಸಹಿತ ಒಟ್ಟು 22 ಪದಕ)ಗಳೊಂದಿಗೆ ರನ್ನರ್ ಅಪ್ ಪ್ರಶಸ್ತಿಗೆ ಭಾಜನವಾಯಿತು. ಪುರುಷರ ವಿಭಾಗದಲ್ಲಿ ಕರ್ನಾಟಕ 156 ಅಂಕ (11 ಚಿನ್ನ, 7 ಬೆಳ್ಳಿ, 1 ಕಂಚು)ಹಾಗೂ ಮಹಿಳಾ ವಿಭಾಗದಲ್ಲಿ ಕರ್ನಾಟಕ 118 ಅಂಕ (6 ಚಿನ್ನ, 5 ಬೆಳ್ಳಿ, 3 ಕಂಚು) ಗಳೊಂದಿಗೆ ತಂಡ ಪ್ರಶಸ್ತಿ ತನ್ನದಾಗಿಸಿಕೊಂಡರು.

ಪುರುಷರ ವಿಭಾಗದಲ್ಲಿ ಕರ್ನಾಟಕದ ಅನೀಶ್ ಎಸ್.ಗೌಡ(4 ಚಿನ್ನ) ಹಾಗೂ ಮಹಿಳಾ ವಿಭಾಗದಲ್ಲಿ ಹಷಿಕಾ ರಾಮಚಂದ್ರ (3 ಚಿನ್ನ, 1 ಬೆಳ್ಳಿ ಹಾಗೂ ಒಂದು ರಾಷ್ಟ್ರೀಯ ದಾಖಲೆ) ಚಾಂಪಿಯನ್‌ಷಿಪ್‌‌ನ ಶ್ರೇಷ್ಠ ಈಜುಪಟುಗಳೆಂದು ವೈಯಕ್ತಿಕ ಪ್ರಶಸ್ತಿ ಗಳಿಸಿದರು. ನಾಲ್ಕು ದಿನಗಳ ಈ ಕೂಟದಲ್ಲಿ ಒಟ್ಟು 5ರಾಷ್ಟ್ರೀಯ ದಾಖಲೆಗಳು ದಾಖಲಾಯಿತು.

Edited By : Shivu K
PublicNext

PublicNext

14/09/2024 05:53 pm

Cinque Terre

34.68 K

Cinque Terre

0

ಸಂಬಂಧಿತ ಸುದ್ದಿ