ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಯನಾಡು ಭೂಕುಸಿತದಲ್ಲಿ ಕುಟುಂಬದ 9 ಸದಸ್ಯರನ್ನ ಕಳೆದುಕೊಂಡ ಯುವತಿಯ ಭಾವಿ ಪತಿಯೂ ಈಗ ರಸ್ತೆ ಅಪಘಾತದಲ್ಲಿ ಸಾವು.!

ತಿರುವನಂತಪುರಂ: ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ಕುಟುಂಬದ ಎಲ್ಲ 9 ಸದಸ್ಯರನ್ನು ಕಳೆದುಕೊಂಡು ನೋವಿನಲ್ಲಿದ್ದ ಸಂತ್ರಸ್ತೆ ಶೃತಿಗೆ ಈಗ ಮತ್ತೊಂದು ಆಘಾತ ಎದುರಾಗಿದೆ.

ಯುವತಿ ಶೃತಿಗೆ ಏಕೈಕ ಆಶ್ರಯ ಎಂಬಂತಿದ್ದ ಭಾವಿ ಪತಿ ಅಂಬ್ಲವಾಯಲ್‌ ಮೂಲದ ಜೆನ್ಸನ್‌ (27) ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕೋಝಿಕ್ಕೋಡ್ - ಕೊಳ್ಳೇಗಾಲ ರಾಷ್ಟ್ರೀಯ ಹೆದ್ದಾರಿಯ ವೆಲ್ಲರಂಕುನ್ನು ಬಳಿ ಮಂಗಳವಾರ ಮಧ್ಯಾಹ್ನ ಬಸ್‌ಗೆ ಓಮ್ನಿ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಜೆನ್ಸನ್ ತೀವ್ರವಾಗಿ ಗಾಯಗೊಂಡಿದ್ದರು. ವ್ಯಾನ್‌ನಲ್ಲಿದ್ದವರಲ್ಲಿ ಶೃತಿ ಕಾಲಿಗೆ ಮಾತ್ರ ಸಣ್ಣಪುಟ್ಟ ಗಾಯವಾಗಿತ್ತು. ಅಪಘಾತದಲ್ಲಿ ಶೃತಿ ಅವರ ಸೋದರ ಸಂಬಂಧಿ ಲಾವಣ್ಯ ಕೂಡ ಗಾಯಗೊಂಡಿದ್ದಾರೆ.

ಜೆನ್ಸನ್ ಅವರನ್ನು ಮೆಪ್ಪಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತಗತಿತ್ತು. ಆದರೆ ರಕ್ತಸ್ರಾವ ತಡೆಯಲಾಗದೆ ಜೆನ್ಸನ್ ಸಾವನ್ನಪ್ಪಿದ್ದಾರೆ.

Edited By : Vijay Kumar
PublicNext

PublicNext

13/09/2024 07:37 am

Cinque Terre

32.21 K

Cinque Terre

0

ಸಂಬಂಧಿತ ಸುದ್ದಿ