ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದ್ಯ ಕುಡಿಯುವಂತೆ ಒತ್ತಾಯಿಸಿ ಜೂನಿಯರ್‌ ಹುಡುಗನಿಗೆ ಸೀನಿಯರ್ಸ್‌ ನಿಂದ ಥಳಿತ, ವಿದ್ಯಾರ್ಥಿಗಳು ಸಸ್ಪೆಂಡ್

ಕಾಲೇಜುಗಳಲ್ಲಿ ಎಷ್ಟೇ ಕಟ್ಟು ನಿಟ್ಟಿನ ರೂಲ್ಸ್‌ ತಂದ್ರು ಈ ರ್ಯಾಗಿಂಗ್‌ ನಿಲ್ಲಿಸೋದಿಕ್ಕೆ ಆಗ್ತಿಲ್ಲ.ಹಿಮಾಚಲ ಪ್ರದೇಶದ ಸೋಲನ್‌ನಲ್ಲಿ ಹಿರಿಯ ವಿದ್ಯಾರ್ಥಿಗಳ ಗುಂಪೊಂದು ಜೂನಿಯರ್‌ ಹುಡುಗನನ್ನು ರೂಮಿಗೆ ಕರೆಸಿ ಮನಸೋ ಇಚ್ಛೆ ಥಳಿಸಿ,ನಿಂದಿಸಿ,ಬೆಲ್ಟ್‌ ನಿಂದ ಹೊಡೆದಿದ್ದಾರೆ.ಈ ದೃಶ್ಯವನ್ನು ಅಲ್ಲೇ ಇದ್ದವರು ರೆಕಾರ್ಡ್‌ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದಾರೆ.ಕಂದಘಾಟ್‌ನಲ್ಲಿರುವ ಬಹ್ರಾ ವಿಶ್ವವಿದ್ಯಾನಿಲಯದ ಹಾಸ್ಟೆಲ್ ಕೊಠಡಿಯಲ್ಲಿ ಈ ಘಟನೆ ನಡೆದಿದೆ.ಜೂನಿಯರ್‌ ಹುಡುಗ ಮದ್ಯ ಸೇವಿಸಲು ನಿರಾಕರಿಸಿದ್ದಕ್ಕೆ ಈ ರೀತಿ ಸೀನಿಯರ್‌ ಬಾಯ್ಸ್‌ ದುವರ್ತನೆ ತೋರಿದ್ದಾರೆ. ಹಲವು ದಿನಗಳಿಂದ ಈ ಹುಡುಗನ ಮೇಲೆ ಸೀನಿಯರ್ಸ್‌ ಕಿರುಕುಳ ನೀಡುತ್ತಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದು,ಪೊಲೀಸರು ಪ್ರಕರಣ ದಾಖಲಿಸಿಕೊಂಡು ಐವರು ಆರೋಪಿಗಳನ್ನು ಬಂಧಿಸಿದ್ದು,ಶೀಘ್ರವೇ ಜಾಮೀನು ಕೂಡ ಮಂಜೂರು ಮಾಡಲಾಗಿದೆ.ಮಾಡಿದ್ದುಣ್ಣು ಮಹರಾಯ ಎನ್ನುವಂತೆ ಈ ಐದು ಮಂದಿ ನಟೋರಿಯಸ್‌ ವಿದ್ಯಾರ್ಥಿಗಳನ್ನು ವಿಶ್ವ ವಿದ್ಯಾಲಯದಿಂದ ಸಸ್ಪೆಂಡ್‌ ಮಾಡಲಾಗಿದೆ.

Edited By : Somashekar
PublicNext

PublicNext

12/09/2024 07:06 pm

Cinque Terre

114.42 K

Cinque Terre

5

ಸಂಬಂಧಿತ ಸುದ್ದಿ