ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಅತಿಯಾದ ಮೊಬೈಲ್ ಬಳಕೆ ಒತ್ತಡಗಳಿಗೆ ಕಾರಣ - ಹಿರಿಯ ಸಿವಿಲ್ ನ್ಯಾಯಾಧೀಶೆ ಶೋಭಾ ಬಿಜಿ

ಮಂಗಳೂರು: ಭಾರತದಲ್ಲಿ ಯುವಜನತೆ ಆತ್ಮಹತ್ಯೆ ಮಾಡುತ್ತಿರುವುದು ಪ್ರತಿನಿತ್ಯ ವರದಿಯಾಗುತ್ತಿದೆ. ಅತಿಯಾದ ಮೊಬೈಲ್ ಬಳಕೆ ಪರಿಣಾಮವೇ ಮಾನಸಿಕ ಒತ್ತಡಗಳಿಗೆ ಕಾರಣ‌. ಇದುವೇ ಯುವ ಸಮುದಾಯವನ್ನು ಬಲಿ ಪಡೆಯುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಶೋಭಾ ಬಿ.ಜಿ. ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ಎನ್ಎಸ್ಎಸ್ ಮಂಗಳೂರು ವಿವಿ ಇದರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮವು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡೆಸೀನಿಯಲ್ ಮೆಮೋರಿಯಲ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಂದು ಮಗುವಿನ ದೈನಂದಿನ ಆಹಾರ ಸೇವನೆ ಮೊಬೈಲ್ ಮೂಲಕವೇ ಆಗುತ್ತಿದೆ. ಒತ್ತಡದ ಜೀವನದೊಂದಿಗೆ ತಾಯಂದಿರು ಮಗುವಿಗೆ ಪಾಲನೆ ಪೋಷಣೆಯ ಸಂದರ್ಭ ಮೊಬೈಲ್ ದುಷ್ಪರಿಣಾಮಗಳ ಬಗ್ಗೆ ಕಾಳಜಿ ವಹಿಸಬೇಕು. ಕೇವಲ ಅಂಕಗಳನ್ನು ಪಡೆಯಲು ವಿದ್ಯಾರ್ಥಿ ಮಕ್ಕಳ ಮೇಲೆ ಒತ್ತಡ ಹಾಕಬಾರದು ಪ್ರತಿಯೊಬ್ಬ ಪೋಷಕರು ಈ ಬಗ್ಗೆ ಚಿಂತನೆಯನ್ನು ಮಾಡಬೇಕು. ಯುವ ಜನತೆ ಈ ಬಗ್ಗೆ ಹೆಚ್ಚಿನ ಕಾಲೇಜು ಮಟ್ಟದಲ್ಲಿ ಮೂಡಿಸಲು ಕರೆ ನೀಡಿದರು.

Edited By : Nagaraj Tulugeri
Kshetra Samachara

Kshetra Samachara

12/09/2024 05:01 pm

Cinque Terre

6.29 K

Cinque Terre

0

ಸಂಬಂಧಿತ ಸುದ್ದಿ