ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮುಖ್ಯಮಂತ್ರಿ ಸ್ಥಾನಕ್ಕೆ ದೊಡ್ಡ ಲಿಸ್ಟ್ ಕ್ಯೂ ನಿಂತಿದೆ- ಸಂಸದ ಶೆಟ್ಟರ್ ಟೀಕೆ

ಹುಬ್ಬಳ್ಳಿ: ಹೊರಗಡೆ ನಾವು ಎಲ್ಲರೂ ಸಿಎಂ ಸಿದ್ದರಾಮಯ್ಯನವರ ಜೊತೆಗೆ ಇದ್ದೇವೆ. ಅವರೇ ಸಿಎಂ ಆಗಿ ಮುಂದುವರೆಯಲಿ ಅಂತ ಹೇಳಿಕೆ ನೀಡುತ್ತಾರೆ.‌ ಆದ್ರೆ, ಒಳಗಡೆ ಕುಸ್ತಿ ಆರಂಭವಾಗಿದೆ. ಇದು ಬರುವ ದಿನಗಳಲ್ಲಿ ಇನ್ನೂ ‌ಜಾಸ್ತಿ‌ ಆಗಲಿದೆ. ಸಿಎಂ ಆಗಲು ದೊಡ್ಡ ಲಿಸ್ಟ್ ಕ್ಯೂ ನಿಂತಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಜಗದೀಶ್ ಶೆಟ್ಟರ್ ಟೀಕೆ ಮಾಡಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಶೆಟ್ಟರ್, ಸಿಎಂ ಆಗಲು ಆರ್ .ವಿ. ದೇಶಪಾಂಡೆಯವರು ಮೊದಲು ಮಾತು ಆರಂಭಿಸಿದರು. ಈಗ ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಜಿ.ಪರಮೇಶ್ವರ್ ಹೀಗೆ ದೊಡ್ಡ ಲಿಸ್ಟ್ ಕ್ಯೂ ನಿಂತಿದೆ. ಮತ್ತೊಂದು ಕಡೆ ಡಿ.ಕೆ. ಶಿವಕುಮಾರ್ ನಾನೇ ಹಕ್ಕುದಾರ ಅಂತ ಒಳಗೇ ಪ್ರಯತ್ನ ಆರಂಭಿಸಿದ್ದಾರೆ ಎಂದರು.

ಇನ್ನು ಗಣೇಶ ಪ್ರಸಾದ ವಿತರಣೆಗೆ ಕಡ್ಡಾಯ ಪರೀಕ್ಷೆ ಸರಿಯಲ್ಲ. ಬರುವ ದಿನಗಳಲ್ಲಿ ಸಾಮೂಹಿಕ ದಾಸೋಹ, ಹೋಟೆಲ್ ಗಳಲ್ಲಿ ಪರೀಕ್ಷೆ ‌ಮಾಡಬೇಕಾಗುತ್ತದೆ.‌ ಕೇಂದ್ರ ಸರ್ಕಾರದ ಮಾನದಂಡಗಳನ್ನು ರಾಜ್ಯ ಸರ್ಕಾರ ಯಾವಾಗ ಸರಿಯಾಗಿ ಜಾರಿಗೊಳಿಸಿದೆ? ಹೆಸರು ಹೇಳೋದು ಕೇಂದ್ರ ಸರ್ಕಾರದ್ದು. ಹಿಂದೂಗಳ ಹಬ್ಬ ಬಂದಾಗ ತೊಂದರೆ ಕೊಡೋದು, ಇದರ ಹಿಂದೆ ಕಾಂಗ್ರೆಸ್ ನ ಹಿಡನ್ ಅಜೆಂಡಾ ಇದೆ. ಚನ್ನಮ್ಮ ಮೈದಾನದಲ್ಲಿ ‌ಈ‌ ಬಾರಿ ಅದ್ಧೂರಿಯಾಗಿ ಶ್ರೀ ಗಣೇಶೋತ್ಸವ ನಡೆಯುತ್ತಿವೆ. ಹೀಗಾಗಿ ಕುಟುಂಬ ಸಮೇತವಾಗಿ ಶ್ರೀ ಗಣೇಶನ ದರ್ಶನಕ್ಕೆ ಬಂದಿದ್ದೇವೆ ಎಂದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

07/09/2024 08:00 pm

Cinque Terre

78.14 K

Cinque Terre

2

ಸಂಬಂಧಿತ ಸುದ್ದಿ