ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಾಸಕ್ತರ ಮನಸೂರೆಗೊಂಡ ನೀರ ಹೆಣ ನಾಟಕ, ಪತ್ರಕರ್ತ ಡಾ.ಶಿವರಾಮ ಅಸುಂಡಿ ರಚಿತ ಕಥೆ..!

ಹುಬ್ಬಳ್ಳಿ/ಬೆಂಗಳೂರು : ಹಿರಿಯ ವರದಿಗಾರ ಶಿವರಾಮ ಅಸುಂಡಿ ಅವರ ನೀರ ಹೆಣ ನಾಟಕ ಬೆಂಗಳೂರಿನಲ್ಲಿ ಪ್ರದರ್ಶನಗೊಂಡಿತು. ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ರಂಗ ವಿನೂತನ ಟ್ರಸ್ಟ್ ಬಳಗ ವತಿಯಿಂದ 'ನೀರ ಹೆಣ' ನಾಟಕವನ್ನು ರಂಗದ ಮೇಲೆ ಪ್ರದರ್ಶಿಸಲಾಯಿತು. ಕಾರ್ಯಕ್ರಮಕ್ಕೆ ಹೊಸತು ಪತ್ರಿಕೆ ಸಂಪಾದಕ ಸಿದ್ದನಗೌಡ ಪಾಟೀಲ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಬದಲಾದ ಪರಿಸ್ಥಿತಿಯಲ್ಲಿ ನಾವು ಮಾನವೀಯ ಸಂಬಂಧಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಹಾಗಂತ ನಿರಾಶರಾಗಬೇಕಿಲ್ಲ. ಒಂದಲ್ಲ ಒಂದು ದಿನ ಮನುಷ್ಯ ಸಮಾಜ ಜೀವಿ ಅನ್ನೋ ಅಂಶ ಗೆಲ್ಲುತ್ತದೆ. ಸಿನಿಮಾ, ಸೀರಿಯಲ್ ಗಳ ನಡುವೆ ರಂಗಭೂಮಿ ಸಂಘರ್ಷ ನಡೆಸುತ್ತಿದೆ. ಮತ್ತೊಂದೆಡೆ ಕ್ರೈಂ, ಫ್ಯಾಂಟೆಸಿ ಆಡಂಬರದಲ್ಲಿ ಒಳ್ಳೆಯ ಕಥೆಗಳು ರಂಗದ ಮೇಲೆ ಬರುವಲ್ಲಿ ವಿಫಲವಾಗುತ್ತಿವೆ. ಇಂತಹ ಸಂದಂರ್ಭದಲ್ಲಿ ನೀರ ಹೆಣ ಕಥೆಯನ್ನು ರಂಗ ವಿನೂತನ ತಂಡ ರಂಗದ ಮೇಲೆ ತರೋ ಸಾಹಸ ಮಾಡಿರೋದು ಒಳ್ಳೆಯ ಬೆಳವಣಿಗೆ ಎಂದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿವರಾಮ ಅಸುಂಡಿ, ಇತ್ತೀಚಿನ ದಿನಗಳಲ್ಲಿ ನಾಟಕ ಮಾಡೋದು ತುಂಬಾ ವೆಚ್ಚದಾಯಕವಾಗಿದೆ. ಆಕಾಶವಾಣಿಯಲ್ಲಿ ಪ್ರಸಾರವಾಗಿದ್ದ ಈ ನಾಟಕವನ್ನು ರಂಗದ ಮೇಲೆ ಪ್ರಯೋಗ ಮಾಡೋದನ್ನು ರಂಗ ವಿನೂತನ ತಂಡ ಚಾಲೆಂಜಿಂಗ್ ಆಗಿ ತೆಗೆದುಕೊಂಡಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಲಬುರಗಿ ಆಕಾಶವಾಣಿ ನಿವೃತ್ತ ಅಧಿಕಾರಿ ಅಂಜನಾ ಯಾತನೂರು ಮಾತನಾಡಿ, ನೀರ ಹೆಣ ನಾಟಕ ನನಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟಿತು. ಅದರ ರಂಗ ಪ್ರಯೋಗವು ಯಶಸ್ವಿಯಾಗಲಿ ಎಂದರು. ಕಾರ್ಯಕ್ರಮದಲ್ಲಿ ಕೆ. ಟಿ. ಮುನಿರಾಜು, ಕೆ. ಪಿ. ಪ್ರಸನ್ನಕುಮಾರ್, ಕೃಷ್ಣಕುಮಾರ್, ಜೆ. ಕೆ.ರಾಜಶೇಖರ ಮೂರ್ತಿ, ಶ್ಯಾಮಸುಂದರ್ ಮತ್ತು ಜಿತುರಿ ವಿಜಯಕುಮಾರ್ ಉಪಸ್ಥಿತರಿದ್ದರು.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

06/08/2024 03:57 pm

Cinque Terre

46.28 K

Cinque Terre

0

ಸಂಬಂಧಿತ ಸುದ್ದಿ