ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಜಿಲ್ಲೆಯಾದ್ಯಂತ ಹೆಚ್ಚಾದ ಮಳೆ - ಹಳದಿ ವರ್ಣಕ್ಕೆ ತಿರುಗುತ್ತಿರುವ ಬೆಳೆ

ಧಾರವಾಡ: ಹೆಚ್ಚೂ ಕಡಿಮೆ 10-15 ದಿನಗಳಿಂದ ಧಾರವಾಡ ಜಿಲ್ಲೆಯಾದ್ಯಂತ ವಿಪರೀತ ಮಳೆಯಾಗುತ್ತಿದೆ. ಈ ಮಳೆ ಹಿನ್ನೆಲೆಯಲ್ಲೇ ಧಾರವಾಡ ಜಿಲ್ಲೆಯಾದ್ಯಂತ ಎರಡು ದಿನಗಳ ಕಾಲ ಎಲ್ಲ ಶಾಲಾ, ಕಾಲೇಜುಗಳಿಗೆ ರಜೆ ಕೂಡ ಘೋಷಣೆ ಮಾಡಲಾಗಿದೆ.

ಕಳೆದ 10-15 ದಿನಗಳಿಂದ ವಿಪರೀತ ಮಳೆಯಾಗುತ್ತಿದ್ದು, ಇದರಿಂದ ರೈತ ಬೆಳೆದ ಬೆಳೆಗಳಿಗೆ ಈಗ ರೋಗದ ಭೀತಿ ಎದುರಾಗಿದೆ. ಅಲ್ಲದೇ ಹಚ್ಚ ಹಸುರಿನಿಂದ ಕಂಗೊಳಿಸಬೇಕಿದ್ದ ಬೆಳೆ ಈಗ ಹೆಚ್ಚಿನ ಮಳೆಯಿಂದ ಹಳದಿ ವರ್ಣಕ್ಕೆ ತಿರುಗುತ್ತಿವೆ.

ಧಾರವಾಡ ಜಿಲ್ಲೆಯಲ್ಲಿ ಬೆಣ್ಣೆ ಹಳ್ಳ ಹಾಗೂ ತುಪ್ಪರಿ ಹಳ್ಳಗಳು ಪ್ರವಾಹ ಸೃಷ್ಟಿಸುವ ಹಳ್ಳಗಳಾಗಿದ್ದು, ಸದ್ಯಕ್ಕೆ ಈ ಹಳ್ಳಗಳಿಂದ ಹೆಚ್ಚಿನ ನೀರು ಹೊರ ಬಿದ್ದಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಧಾರವಾಡ ಜಿಲ್ಲಾಡಳಿತ ಪ್ರವಾಹ ಎದುರಿಸಲು ಸಕಲ ಸಿದ್ಧತೆ ಸಹ ಮಾಡಿಕೊಂಡಿದೆ. ಮುಂಗಾರು ಹಂಗಾಮಿನಲ್ಲಿ ಹೆಚ್ಚಾಗಿ ಹೆಸರು, ಉದ್ದು, ಹತ್ತಿ ಬಿತ್ತೆಯಾಗುತ್ತದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರೈತಾಪಿ ವರ್ಗ ಹೊಲದಲ್ಲಿ ಏನೂ ಕೆಲಸ ಮಾಡಲು ಬಾರದಂತಾಗಿದೆ. ಈಗಾಗಲೇ ಕೆಲ ಪ್ರದೇಶಗಳಲ್ಲಿ ಬೆಳೆಗಳು ಹಳದಿ ವರ್ಣಕ್ಕೆ ತಿರುಗುತ್ತಿವೆ.

ಬಿತ್ತನೆಯಾದ ನಂತರ ಮಳೆ ಆಗಬೇಕಿತ್ತು. ಆಗ ಮಳೆಯ ಕೊರತೆ ಇತ್ತು. ಆದರೆ, ಕೆಲ ದಿನಗಳ ನಂತರ ಆರಂಭವಾದ ಮಳೆ ಇದೀಗ ಬೆಳೆಗಳಿಗೆ ರೋಗದ ಭೀತಿ ಹುಟ್ಟು ಹಾಕಿದೆ.

Edited By : Vinayak Patil
Kshetra Samachara

Kshetra Samachara

26/07/2024 07:31 pm

Cinque Terre

118.37 K

Cinque Terre

1

ಸಂಬಂಧಿತ ಸುದ್ದಿ