ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೂರ್ಯ ಹುಟ್ಟು ಹಬ್ಬಕ್ಕೆ ಕಂಗುವ ಚಿತ್ರದ ಮೊದಲ ಹಾಡು ರಿಲೀಸ್‌, ವಾವ್..!‌ ಎಂದ್ರೂ ಫ್ಯಾನ್ಸ್

ಸೂರ್ಯ ಅಭಿನಯದ ಮುಂಬರುವ ಮೋಸ್ಟ್‌ ಎಕ್ಸ್‌ ಪೆಕ್ಟೆಡ್‌ ಸಿನಿಮಾ ಕಂಗುವ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಜುಲೈ 23 ರಂದು ಸೂರ್ಯ ಅವರ ಜನ್ಮದಿನದಂದೇ ತಯಾರಕರು ಫೈರ್ ಸಾಂಗ್ ನ ಲಿರಿಕಲ್‌ ವೀಡಿಯೋ ಬಿಡುಗಡೆ ಮಾಡಿದ್ದಾರೆ.ಸೂರ್ಯ ಹಿಂದೆಂದೂ ಕಾಣದ ರಗಡ್‌ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದಾರೆ,ಉದ್ದ ಕೂದಲು ವಿಚಿತ್ರ ಗೆಟಪ್‌ ನ ಹಾಡು ಇದಾಗಿದೆ.ಆದರೆ ವೀಡಿಯೋ ಸಾಂಗ್‌ ಇನ್ನಷ್ಟೇ ಬಿಡುಗಡೆ ಮಾಡಬೇಕು.ಮೇಲ್ನೋಟಕ್ಕೆ ಸೂರ್ಯ ಬುಡಕಟ್ಟು ಜನಾಂಗದವರೊಂದಿಗೆ ನೃತ್ಯ ಮಾಡುತ್ತಿರುವಂತೆ ಕಾಣಿಸ್ತಾರೆ, ಇದು ಅವರ ಪಾತ್ರ ಪರಿಚಯದ ವೀಡಿಯೋವಾಗಿದೆ. ಹಾಡಿನ ಬಿಡುಗಡೆಗೂ ಮುನ್ನ ಚಿತ್ರತಂಡದಿಂದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಚಿತ್ರದಲ್ಲಿನ ಸಂಪ್ರದಾಯವಾದ ಮತ್ತು ಆಧುನಿಕತೆಯ ನಡುವಿನ ಸಂಘರ್ಷದ ಬಗ್ಗೆ ಸುಳಿವು ನೀಡಲಾಗಿದೆ.2022 ರ ಚಿತ್ರಗಳಾದ ಎಥರ್ಕ್ಕುಂ ತುನಿಂಧವನ್ ಮತ್ತು ವಿಕ್ರಮ್ ನಂತರ ಸೂರ್ಯ ಅವರನ್ನು ಮತ್ತೆ ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದು ಕಂಗುವ ಚಿತ್ರದ ಮೂಲಕ ಮತ್ತೇ ಪ್ಯಾನ್ಸ್‌ ಗೆ ಭರ್ಜರಿ ಟ್ರೀಟ್‌ ನೀಡ್ತಾರೆ ಸೂರ್ಯ. ಈ ಸಿನಿಮಾ ಇದೇ ಅಕ್ಟೋಬರ್‌ 10 ರಂದು ತೆರೆಕಾಣಲಿದೆ.‌

Edited By : Suman K
PublicNext

PublicNext

26/07/2024 05:33 pm

Cinque Terre

55.3 K

Cinque Terre

0