ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮನೆ ಕುಸಿದು ಬಿದ್ದು ಲಕ್ಷಾಂತರ ರೂ. ನಷ್ಟ

ಮಂಗಳೂರು: ನಗರದ ಹೊರವಲಯದ ಕಾಜಿಲ ನೂಯಿ ಎಂಬಲ್ಲಿ ಗಾಳಿ ಮಳೆಗೆ ಮನೆಯೊಂದು ಕುಸಿದುಬಿದ್ದ ಘಟನೆ ನಡೆದಿದೆ.

ಮಂಗಳೂರಿನಲ್ಲೂ ಬಿಟ್ಟು ಬಿಟ್ಟು ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಧನಲಕ್ಷ್ಮೀ ಎಂಬವರ ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮನೆಮಂದಿ ಅಂಗಳದಲ್ಲಿದ್ದ ಕಾರಣ ಭಾರೀ ದುರಂತವೊಂದು ತಪ್ಪಿದಂತಾಗಿದೆ. ಆದರೆ ಮನೆ ಸಾಮಗ್ರಿ ಸೇರಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ‌. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Vinayak Patil
PublicNext

PublicNext

26/07/2024 05:15 pm

Cinque Terre

36.31 K

Cinque Terre

0

ಸಂಬಂಧಿತ ಸುದ್ದಿ