ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ಡೆಂಘೀ ಹಾಟ್ ಸ್ಪಾಟ್ ಎಲ್ಲೆಲ್ಲಿ ಗೊತ್ತಾ?

ಬೆಂಗಳೂರು: ರಾಜ್ಯದಲ್ಲಿ ಮುನ್ನುಗ್ಗುತ್ತಿರುವ ಡೆಂಗ್ಯೂ ಅಬ್ಬರದಲ್ಲಿ ಬೆಂಗಳೂರಿನ ಕೇಸ್‌ಗಳ ಸಂಖ್ಯೆಯೇ ಜಾಸ್ತಿಯಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡಾ ಒಪ್ಪಿಕೊಂಡಿದ್ದು ಬೆಂಗಳೂರಿನಲ್ಲಿ ಶೇ. 50ರಷ್ಟು ಡೆಂಗ್ಯೂ ಕೇಸ್ ಇದೆ. ಈ ಸಲುವಾಗಿ ಈಗಾಗಲೇ 35 ಹಾಟ್ ಸ್ಪಾಟ್‌ಗಳನ್ನೂ ಗುರುತಿಸಲಾಗಿದೆ. ಇದ್ರ ಜೊತೆಗೆ ಬೇರೆ ಏನು ಮಾಡಬೇಕು? ಕಡಿವಾಣಕ್ಕೆ ಯಾವ ರೀತಿ ಕ್ರಮ ಕೈಗೊಳ್ಳಬೇಕು? ಈ ಬಗ್ಗೆ ಎಂದು ಸಭೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಆರೋಗ್ಯ ಕಾರ್ಯಕರ್ತರ ಸಂಖ್ಯೆ ಕಡಿಮೆ ಇದೆ. ಹಾಗಾಗಿ NGO, NSS ಸ್ವಯಂ ಸೇವಕರನ್ನೂ ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ. ಲಾರ್ವಾ ಉತ್ಪತ್ತಿ ಆಗುವ ಪ್ರದೇಶ ನಾಶ ಮಾಡಲು ಜೊತೆಗೆ ಹೆಚ್ಚೆಚ್ಚು ಫಾಗಿಂಗ್ ಮಾಡಲು ಸೂಚನೆ ಕೊಡಲಾಗಿದೆ ಅಂತ ಸಚಿವರು ತಿಳಿಸಿದ್ದಾರೆ.

Edited By : Shivu K
PublicNext

PublicNext

26/07/2024 07:12 am

Cinque Terre

36.39 K

Cinque Terre

0

ಸಂಬಂಧಿತ ಸುದ್ದಿ