ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಆಂಧ್ರ ಪ್ರದೇಶದ ಕೃಷ್ಣಾ ನದಿಯಿಂದಲ್ಲೂ ಚಿಕ್ಕಬಳ್ಳಾಪುರ, ಕೋಲಾರ,ಬೆಂಗಳೂರು ಗ್ರಾಮಾಂತರಕ್ಕೆ ನೀರು ತರಬಹುದು - ಡಾ.ಕೆ ಸುಧಾಕರ್

ಬೆಂಗಳೂರು : ಎತ್ತಿನಹೊಳೆ ಯೋಜನೆ ಬಗ್ಗೆ ನನ್ನ ತಕರಾರು ಇಲ್ಲ ಆದ್ರೆ ಇನ್ನೊಂದು ಸುಲಭ ಮಾರ್ಗದಿಂದಲ್ಲೂ ನೀರು ತರಬಹುದಾಗಿದೆ ಅದು ಆಂಧ್ರ ಪ್ರದೇಶದ ಕೃಷ್ಣಾ ನದಿಯಿಂದಲ್ಲೂ ಚಿಕ್ಕಬಳ್ಳಾಪುರ, ಕೋಲಾರ,ಬೆಂಗಳೂರು ಗ್ರಾಮಾಂತರ ಕ್ಕೆ ನೀರು ತರಬಹುದು ಎಂದು ಮಾಜಿ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.

ನಮ್ಮ ಗಡಿ ಬಾಗದ ಸಮೀಪದಲ್ಲೇ ಕೃಷ್ಣ ನದಿ ನೀರು ಬಂದಿದೆ, ಅವರ ಭಾಗದ ಕೆರಗಳೆಲ್ಲ ನೀರು ತುಂಬಿದೆ.10 ಟಿಎಂಸಿ ನೀರನ್ನ ನಾರಾಯಣಪುರ ಡ್ಯಾಂಗೆ ಕೊಟ್ಟು ಆಂದ್ರ ಕೃಷ್ಣಾ ನದಿ ನೀರನ್ನ ನಮ್ಮ ಭಾಗಕ್ಕೆ ತರಬಹುದಾಗಿದೆ. ಇದು ಕಡಿಮೆ ವೆಚ್ಚದಲ್ಲಿ ಈ ಯೋಜನೆ ಆಗಲಿದೆ. ಶಾಶ್ವತವಾಗಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ. ಇದ್ರ ಬಗ್ಗೆ ಸಿಎಂ ಸರ್ವ ಪಕ್ಷ ನಿಯೋಗವನ್ನ ಪ್ರಧಾನಮಂತ್ರಿ ಬಳಿ ಕೊಂಡೊಯ್ಯುವಂತೆ ಸುಧಾಕರ್ ಮನವಿ ಮಾಡಿದ್ದಾರೆ.

ಈಗ ಎತ್ತಿನಹೊಳೆ ಯೋಜನೆಯ ಮೊದಲನೇ ಹಂತ ಅನುಷ್ಠಾನಕ್ಕಾಗಿ ನಾನು ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. 2014 ರಲ್ಲೇ ನನ್ನ ಅಧ್ಯಕ್ಷತೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಅವತ್ತು ಸಿದ್ದರಾಮಯ್ಯ ಶಂಕುಸ್ಥಾಪನೆ ಮಾಡಿದ್ರು. ಮೊದಲನೇ ಹಂತ ಇವತ್ತು ಉದ್ಘಾಟನೆ ಆಗ್ತಿದೆ ನನೆಗೂ ಸಹ ಡಿಸಿಎಂ ಡಿಕೆಶಿ ಆಹ್ವಾನ ನೀಡಿದ್ದರು.

ಈ ಯೋಜನೆ ಚಿಕ್ಕಬಳ್ಳಾಪುರ ಕೋಲಾರ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಬಯಲುಸೀಮೆ ಜನರಿಗೆ ಕುಡಿಯುವ ನೀರು ತಲುಪಿಸಬೇಕು ಎಂದು ಮಾಡಿದ ವಿಶೇಷ ಯೋಜನೆ ಇದು. ಚಿಕ್ಕಬಳ್ಳಾಪುರ ಕೋಲಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಮೊದಲನೇ ಹಂತದಲ್ಲಿ ನೀರು ಬರೋದು ಅಸಾಧ್ಯ ಯಾಕಂದರೆ ಕೊರಟಗೆರೆ ದೊಡ್ಡಬಳ್ಳಾಪುರ ಮಧ್ಯೆ ಜಲಾಶಯ ನಿರ್ಮಾಣ ಮಾಡಬೇಕು ಅದ್ರ ಭೂಸ್ವಾದೀನ ಆಗಿಲ್ಲ.

ನಾನು ಇದರಲ್ಲಿ ರಾಜಕಾರಣ ಮಾಡೋಕೆ ಹೋಗಲ್ಲ ಕಾಮಗಾರಿ ವೇಗ ಪಡೆದುಕೊಂಡಿದ್ದೇ ನಮ್ಮ ಕಾಲದಲ್ಲಿ

2022 ರಲ್ಲೇ ಉದ್ಘಾಟನೆ ಆಗಬೇಕಿತ್ತು ಕಾರಣಾಂತರಗಳಿಂದ ಆಗಲಿಲ್ಲ ಆದ್ರೆ ಇವತ್ತು ಸಂತೋಷ ಆಗ್ತಿದೆ.

ಡಿಸಿಎಂ ಡಿಕೆಶಿಯವರ ಬಳಿ ನಾನು ಮನವಿ ಮಾಡ್ತೀನಿ ಮುಂದಿನ ಕಾಮಗಾರಿಯನ್ನ ಆದಷ್ಟು ಬೇಗ ಮಾಡಿ, ಅನೇಕ ಯೋಜನೆಗಳಿಗೆ ಸಾಲ ಮಾಡ್ತೀದ್ದೀರಾ ಇಂಥ ಯೋಜನೆಗೆ ಮಾಡಿ. ನಾವು ಎಸ್ ಟಿ ಪಿ ನೀರನ್ನ ಕುಡಿಯುವ ನೀರು ಸೇವನೆ ಮಾಡ್ತಿದ್ದೇವೆ, ದೇಶದಲ್ಲಿ ಎಲ್ಲಿಯೂ ಇಲ್ಲ ಇಂಥ ಪರಿಸ್ಥಿತಿ ಇಲ್ಲ ಇದು ನಮ್ಮ ಭಾಗದ ದುರಾದೃಷ್ಟ ಶಾಪಗ್ರಸ್ತವಾಗಿದ್ದೇವೆ. ಈ ಶಾಪದಿಂದ ವಿಮೋಚನೆ ಮಾಡಿ ಪಣ್ಯಕಟ್ಟುಕೊಳ್ಳಿ ಎಂದು ಸುಧಾಕರ್ ಮನವಿ

Edited By : Shivu K
PublicNext

PublicNext

06/09/2024 01:59 pm

Cinque Terre

35.23 K

Cinque Terre

0

ಸಂಬಂಧಿತ ಸುದ್ದಿ