ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆಸ್ಪತ್ರೆಯಲ್ಲಿ ಕೇಳಿ ಬಂದ ಕಂಪ್ಲೆಂಟ್ಸ್ ಬಗ್ಗೆ ವೈದ್ಯಕೀಯ ಶೈಕ್ಷಣಿಕ ಸಚಿವರು ಏನಂದ್ರು?

ಬೆಂಗಳೂರು: ಸರ್ಪೈಸ್ ವಿಸಿಟ್ ನಂತರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಆಸ್ಪತ್ರೆಗಳ ಸಮಸ್ಯೆ ಬಗ್ಗೆ ಹೇಳಿದರು. ಕಿದ್ವಾಯಿ ಆಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆಗಳು ಇವೆ. ಆದರೆ ಹಲವು ಅಭಿವೃದ್ಧಿ ಕೆಲಸಗಳು ಕೂಡ ನಡೆದಿವೆ. ಈ ಹಿಂದೆ ವೈಟಿಂಗ್ ಪಿರಿಯಡ್ ಇತ್ತು. ರೋಗಿಗಳು ಬಂದು ತುಂಬಾ ಸಮಯ ಕಾಯಬೇಕಿತ್ತು. ಸಮಸ್ಯೆಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತದೆ. ಸಿಬ್ಬಂದಿ ಕೊರತೆ ಹಾಗೂ ಪರಿಕರಗಳ ಕೊರತೆ ಇದೆ. ಆದಷ್ಟು ಬೇಗ ಟೆಂಡರ್ ಕರೆಯಲಾಗುತ್ತದೆ ಎಂದರು.

ಕಿದ್ವಾಯಿ ಆಸ್ಪತ್ರೆಯಲ್ಲಿ ಪರೀಕ್ಷೆ ವರದಿ ತುಂಬಾ ತಡವಾಗಿ ಬರುವ ದೂರು ಇದೆ. ಫಾಸ್ಟ್ ಟ್ರಾಕ್ ಇರೋದರಿಂದ ಬೇಗನೇ ರೆಸ್ಪಾನ್ಸ್ ಸಿಗುತ್ತಿದೆ. ರೋಗಿಗಳನ್ನು ಎಲ್ಲಾ ಕಡೆ ಮಾತಾಡಿಸಿದೆ. ಎಲ್ಲಾ ರೋಗಿಗಳು ಚಿಕಿತ್ಸೆ ಬಗ್ಗೆ ಒಳ್ಳೆ ರೀತಿಯಲ್ಲಿ ಮಾತನಾಡಿದ್ದಾರೆನಾವು ನೆಗೆಟಿವ್ ಮಾತ್ರ ಯಾವಾಗಲೂ ನೋಡಬಾರದು. ಸರ್ಜರಿಗೆ 15 ದಿನಗಳ ಕಾಲ ವೈಟಿಂಗ್ ಪಿರಿಯಡ್ ಇದೆ. ಅದನ್ನು ಸ್ಟ್ರೀಮ್ ಲೈನ್ ಮಾಡುವ ಕೆಲಸ ಮಾಡಲಾಗುತ್ತದೆ. ಮತ್ತೊಂದು ಇಂದಿರಾ ಗಾಂಧಿ ಆಸ್ಪತ್ರೆಯನ್ನು ಕಲ್ಬುರ್ಗಿಯಲ್ಲಿ ಮಾಡುವ ಆಲೋಚನೆ ಇದೆ ಅಂತ ತಿಳಿಸಿದ್ರು.

Edited By : Shivu K
PublicNext

PublicNext

19/06/2024 10:39 pm

Cinque Terre

40.68 K

Cinque Terre

0