ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: 110 ಅಡಿ ಎತ್ತರದ ಧ್ವಜಸ್ತಂಭ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಯು.ಟಿ.ಖಾದರ್

ಉಳ್ಳಾಲದ ಹೆಬ್ಬಾಗಿಲು ತೊಕ್ಕೊಟ್ಟು ಓವರ್ ಬ್ರಿಡ್ಜ್ ಜಂಕ್ಷನ್ ನಲ್ಲಿ 110 ಅಡಿ ಎತ್ತರದ ಧ್ವಜ ಸ್ತಂಭವು ನಿರ್ಮಾಣವಾಗಲಿದೆ. ಈ ಮೂಲಕ ಉಳ್ಳಾಲವನ್ನ ಹಾಗೆ, ಹೀಗೆ ಎಂದು ಮೂದಲಿಸಿದವರಿಗೆ ಉಳ್ಳಾಲದವರು ದೇಶಭಕ್ತರೆಂಬ ಸ್ಪಷ್ಟ ಸಂದೇಶ ರವಾನೆಯಾಗಲಿದೆ. ಹೀಗೆ ಈ ಹಿಂದೆ ಉಳ್ಳಾಲವನ್ನ ಮಿನಿ ಪಾಕಿಸ್ತಾನಕ್ಕೆ ಹೋಲಿಸಿದವರಿಗೆ ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ತೊಕ್ಕೊಟ್ಟು ಓವರ್ ಬ್ರಿಡ್ಜ್ ಜಂಕ್ಷನ್ ನಲ್ಲಿ ನಿರ್ಮಾಣಗೊಳ್ಳಲಿರುವ ಧ್ವಜ ಸ್ತಂಭಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಸರ್ಕಾರದಿಂದ ಧ್ವಜ ಸ್ತಂಭ ನಿರ್ಮಿಸಲು ಅನುದಾನ ಬಿಡುಗಡೆಯಾಗಿದ್ದು ಓವರ್ ಬ್ರಿಡ್ಜ್ ಜಂಕ್ಷನ್ ನಲ್ಲಿ ಶೀಘ್ರವೇ 110 ಅಡಿ ಎತ್ತರದ ಸ್ತಂಭವು ತಲೆ ಎತ್ತಲಿದೆ ಎಂದರು. ಇದಲ್ಲದೆ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಕೊಣಾಜೆ ತೆರಳುವ ರಸ್ತೆಯ ಅಂಚಿನ ಶಾಸಕರ ಕಚೇರಿ ಬಳಿಯೂ 110 ಅಡಿ ಎತ್ತರದ ಧ್ವಜ ಸ್ತಂಭ ನಿರ್ಮಾಣವಾಗಲಿದೆ ಎಂದರು.

Edited By :
PublicNext

PublicNext

31/05/2022 06:21 pm

Cinque Terre

58.78 K

Cinque Terre

4

ಸಂಬಂಧಿತ ಸುದ್ದಿ