ಯಾದಗಿರಿ : ಶಾಲಾ ಕಾಲೇಜುಗಳಿಗೆ ಹಿಜಾಬ್ ಧರಿಸಿ ಬರದಂತೆ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದ ಬೆನ್ನಲ್ಲೇ ವಿದ್ಯಾರ್ಥಿನಿಯರು ಪರೀಕ್ಷೆಯನ್ನು ಬಹಿಷ್ಕರಿಸಿ ಮನೆಗೆ ವಾಪಸಾದ ಘಟನೆ ಸುರಪುರ ತಾಲೂಕಿನ ಕೆಂಬಾವಿ ಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜ ನಲ್ಲಿ ನಡೆದಿದೆ.
ದ್ವಿತಿಯ ಪಿಯುಸಿ ಪೂರ್ವಭಾವಿ ಇಂಗ್ಲಿಷ್ ಪರೀಕ್ಷೆ ಬಿಟ್ಟು 8 ಜನ ವಿದ್ಯಾರ್ಥಿನಿರು ಪರೀಕ್ಷಾ ಕೊಠಡಿಯಿಂದ ಹೊರನಡೆದಿದ್ದಾರೆ. ಹಿಜಾಬ್ ಬಿಟ್ಟು ನಾವು ಕ್ಲಾಸ್ ಗೂ ಬರಲ್ಲ ಎಂದು ಮನೆಯತ್ತ ಮುಖ ಮಾಡಿದ್ದಾರೆ.
ಇನ್ನು ಹಿಜಾಬ್ ತೆಗಿಯದೆ ಬೆಳಿಗ್ಗೆಯಿಂದ ಕೋರ್ಟ ಆದೇಶಕ್ಕೆ ಕಾದು ಕುಳಿತಿದ್ದ ವಿದ್ಯಾರ್ಥಿನಿಯರು ಆದೇಶ ಬಂದ ಬೆನ್ನಲ್ಲೇ ಮನೆಗೆ ತೆರಳಿದ್ದಾರೆ.
PublicNext
15/03/2022 11:57 am