ಕಾಬೂಲ್: ಅಫ್ಘಾನಿಸ್ತಾನದ ಪಂಜ್‌ಶಿರ್ ಪ್ರಾಂತ್ಯವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಾಲಿಬಾನ್ ಹೇಳಿಕೊಂಡಿದೆ.
ಪಂಜ್ಶೀರ್ ಕಣಿವೆಯು ಅಲ್ಲಿನ ಸ್ಥಳೀಯ ಸೇನೆಯ ಹಿಡಿತ ಕೈತಪ್ಪಿದೆ. ನಿನ್ನೆ ಸಂಜೆ ವೇಳೆಗೆ ಪಂಜಶೀರ್ ರಾಜ್ಯಪಾಲರ ಆಡಳಿತ ಭವನಕ್ಕೆ ಎಂಟ್ರಿಯಾಗಿದೆ ಎಂದು ಹೇಳಿಕೆ ನೀಡಿದ್ದ ತಾಲಿಬಾನಿಗಳು, ಇದೀಗ ಪಂಜ್‌ಶಿರ್ ಸಂಪೂರ್ಣ ನಮ್ಮ ವಶವಾಗಿದೆ ಎಂದು ತಾಲಿಬಾನಿಗಳು ಘೋಷಣೆ ಮಾಡಿದ್ದಾರೆ.
ಇದುವರೆಗೂ ಈ ಪ್ರಾಂತ್ಯವು ಅಫ್ಘಾನಿಸ್ತಾನದ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಪಡೆಯ(ಎನ್‌ಆರ್‌ಎಫ್‌ಎ) ನಿಯಂತ್ರಣದಲ್ಲಿತ್ತು. ತಾಲಿಬಾನ್ ಮತ್ತು ಎನ್‌ಆರ್‌ಎಫ್‌ಎ ನಡುವೆ ಹಲವು ದಿನಗಳಿಂದ ಕದನ ನಡೆದಿತ್ತು. ಪಂಜ್‌ಶಿರ್ ವಶಪಡಿಸಿಕೊಳ್ಳುವ ಮೂಲಕ ತಾಲಿಬಾನ್, ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಪಂಜ್‌ಶಿರ್ ಪ್ರಾಂತ್ಯದ ಗವರ್ನರ್ ಕಟ್ಟಡದ ಆವರಣದಲ್ಲಿ ತಾಲಿಬಾನಿಗಳು ನಿಂತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
PublicNext
06/09/2021 12:21 pm