ಗುಹಾಹಟಿಯಲ್ಲಿ ಆನೆಯೊಂದು ಪಾನಿಪುರಿ ತಿಂದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.ಗುಹಾಹಟಿ: ಪಾನಿಪುರಿ ಅಂದ್ರೆ ಯಾರಿಗೆ ಇಷ್ಟ ಇಲ್ಲಾ ಹೇಳಿ. ಈ ಹೆಸರು ಕೇಳುತ್ತಿದ್ದಂತೆ ಬಾಯಲ್ಲಿ ನೀರು ಬರತ್ತೇ ಅಲ್ವೇ?..ಇನ್ನು ಮನುಷ್ಯರು ಬಾಯಿ ಚಪ್ಪರಿಸಿ ಪಾನಿಪುರಿ ತಿನ್ನುವುದನ್ನು ನೋಡೊದ್ದೇವೆ ಸದ್ಯ ಇಲ್ಲೊಂದು ಆನೆ ಪಾನಿಪುರಿ ತಿಂದು ಸುದ್ದಿಯಾಗಿದೆ.
ಈ ಘಟನೆ ನಡೆದಿದ್ದು ಗುಹಾಹಟಿಯಲ್ಲಿ.ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ತೇಜ್ಪುರದಲ್ಲಿ ಆನೆಯೊಂದು ಪಾನಿಪುರಿ ತಿಂದ ವಿಚಾರಕ್ಕೆ ಟ್ವೀಟಿಗರು ಹಲವಾರು ರೀತಿಯಲ್ಲಿ ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ‘ಜನರೇಷನ್ ಅಪ್ ಗ್ರೇಡ್ ಆದ ರೀತಿಯಲ್ಲಿ ಎಲಿಫೆಂಟ್ ಅಪ್ ಗ್ರೇಡ್’ ಆಗಿದೆ. ‘ಇದು ಗರ್ಬಿಣಿ ಆನೆಯಾಗಿರಬೇಕು, ಆದ್ದರಿಂದ ತನ್ನ ಬಯಕೆ ತೀರಿಸಲು ಪಾನಿಪುರಿ ತಿಂದಿರಬೇಕು’. ಅಸ್ಸಾಂ ಪಾನಿಪುರಿ ಎಂದರೆ ಆನೆಗೂ ಇಷ್ಟ’ ಎಂದು ಹಲವಾರು ಮಂದಿ ತಮ್ಮ ಅಭಿಪ್ರಾಯವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
PublicNext
12/10/2022 11:30 am