ರಸ್ತೆಗಳಲ್ಲಿ ಸಂಚಾರ ಮಾಡುವಾಗ ಮೈ ಎಲ್ಲಾ ಕಣ್ಣಾಗಿರಬೇಕು ಸ್ವಲ್ಪ ಯಾಮಾರಿದ್ರೆ ಒಂದಿಲ್ಲೊಂದು ರೀತಿಯಲ್ಲಿ ಆಪತ್ತುಗಳು ಥಂಟ್ ಅಂತಾ ಬಂದುಬಿಡುತ್ತವೆ.ಸದ್ಯ ವೈರಲ್ ಆದ ವಿಡಿಯೋವೊಂದರಲ್ಲಿ ಯುವಕನೊಬ್ಬ ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ಚಾಲನೆ ಮಾಡುತ್ತಾ ಬರುವುದನ್ನು ಕಾಣಬಹುದು. ಹೀಗೆ ಬರುವಾಗ ಎಮ್ಮೆಯಿಂದ ಒದೆ ತಿಂದು ವಿಲಿವಿಲಿ ಒದ್ದಾಡಿದ್ದಾನೆ.
ಈ ವಿಡಿಯೋದಲ್ಲಿ ಒಬ್ಬ ಮಹಿಳೆ ಒಂದು ಎಮ್ಮೆಯನ್ನು ಕರೆದುಕೊಂಡು ತನ್ನಷ್ಟಕ್ಕೆ ತಾನು ಹೊರಟಿರುತ್ತಾಳೆ. ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಎದುರುಗಡೆಯಿಂದ ಒಬ್ಬ ವ್ಯಕ್ತಿ ಬೈಕ್ ತಗೆದುಕೊಂಡು ಬರುತ್ತಿರುತ್ತಾನೆ. ಬೈಕ್ ಎಮ್ಮೆ ಎದುರು ವೇಗವಾಗಿ ಬರುತ್ತಿದ್ದಂತೆಯೇ ಭಯದಿಂದ ಎಮ್ಮೆ ಬೇರೆ ಕಡೆಗೆ ಹೋಗಬೇಕೆಂದು ರಸ್ತೆಯ ಮೇಲೆ ಮತ್ತೊಂದು ಬದಿಗೆ ಹೋಗಲು ಪ್ರಯತ್ನ ಪಡುತ್ತದೆ, ಅಷ್ಟರಲ್ಲಿ ವೇಗವಾಗಿ ಬರುತ್ತಿದ್ದ ವ್ಯಕ್ತಿಯ ಕಂಟ್ರೋಲ್ ತಪ್ಪಿ ಎಮ್ಮೆ ಆ ಬೈಕ್ ಸವಾರನಿಗೆ ಜೋರಾಗಿ ಡಿಕ್ಕಿ ಹೊಡೆದಿದೆ.
ಇನ್ನು ಎಮ್ಮೆ ಗುದ್ದಿಗೆ ಬೈಕ್ ಸಾವರ ಬೀಳುತ್ತಿದ್ದಂತೆ ಮಹಿಳೆ ಆತನನ್ನು ಮೇಲೆ ಎಬ್ಬಿಸಿ ಕೂಡಿಸುತ್ತಾಳೆ ಇನ್ನು ಆ ವ್ಯಕ್ತಿ ಜೀವಂತ ವಿದ್ದಾನೋ ಅಥವಾ ಮೃತ ಪಟ್ಟಿದ್ದಾನೋ ಅನ್ನೋದು ಮಾತ್ರ ತಳಿದಿಲ್ಲ. ಬೈಕ್ ಓಡಿಸುವಾಗ ಸ್ಪೀಡ್ ಕಂಟ್ರೋಲ್ ನಲ್ಲಿರಲಿ.
PublicNext
19/09/2022 10:11 pm