ದೆಹಲಿ : ದೆಹಲಿ ಮೆಟ್ರೋದಲ್ಲಿ ಆಸನದ ವ್ಯವಸ್ಥೆಗೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಪರಸ್ಪರ ಕಿತ್ತಾಡಿಕೊಳ್ಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ವಿಡಿಯೋದಲ್ಲಿ ಒಬ್ಬರು ಆರಾಮವಾಗಿ ಆಸನದ ಮೇಲೆ ಕುಳಿತಿದ್ದರೆ, ಇನ್ನೊಬ್ಬರು ತನಗಾಗಿ ಒಂದು ಸ್ಥಳ ಹುಡುಕಲು ಹೆಣಗಾಡುತ್ತಿರುವುದನ್ನು ಕಾಣಬಹುದು.
ಸದ್ಯ ವಿಡಿಯೋ ಕಂಡ ಲಕ್ಷಾಂತರ ಮಂದಿ ವಿವಿಧ ಕಾಮೆಂಟ ನೀಡಿದ್ದಾರೆ. ನಿಂತಿರುವ ಮಹಿಳೆಗೆ ಇಲ್ಲಿ ಜಾಗ ನೀಡಬಹುದಿತ್ತು ಎಂದು ಟ್ವಿಟರ್ ಬಳಕೆದಾರರು ಸಲಹೆ ನೀಡಿದ್ದಾರೆ.
PublicNext
15/08/2022 10:40 pm