ಪ್ರಪಂಚದಲ್ಲಿ ಬೆಲೆ ಕಟ್ಟಲಾಗದ ಬಾಂಧವ್ಯ ಅಂದ್ರೆ ಅದು ಅಣ್ಣ ತಂಗಿಯರ ಸಂಬಂಧ ಪ್ರತಿ ಹೆಣ್ಣುಮಗಳ ಜೀವನದಲ್ಲಿ ಮದುವೆ ಎಂಬ ಸುಸಂದರ್ಭ ಬಂದಾಗ ಹೆತ್ತವರಿಗಿಂತಲೂ ಮೊದಲು ನೋವಾಗುವುದು ಅಣ್ಣ,ತಮ್ಮಂದಿರಿಗೆ.
ಒಡಹುಟ್ಟಿದವಳು ಮನೆ ತೊರೆಯುತ್ತಾಳೆ ಎಂದಾಕ್ಷಣ ಹೃದಯ ಹಿಂಡಿದಂತ್ತಾಗುತ್ತದೆ. ಆದರೆ ಅಕ್ಕ,ತಂಗಿ ಬಾಳುವ ಮನೆ ಸ್ವರ್ಗವಾಗಿರಲಿ ಎಂದು ಹಾರೈಸುವ ಸಹೋದರರು ಪ್ರೀತಿಯಿಂದ ಆಕೆಯ ಮದುವೆಯನ್ನು ಅವಿಸ್ಮರಣೀಯ ಮಾಡಲು ಮುಂದಾಗುತ್ತಾರೆ.
ಸದ್ಯ ವೈರಲ್ ಆದ ವಿಡಿಯೋವೊಂದರಲ್ಲಿ ಸಹೋದರರು ತಮ್ಮ ಸಹೋದರಿಯನ್ನು ಅಂಗೈಯಲ್ಲಿ ನಡೆಸಿ ಹಸೆಮಣೆ ತಲುಪಿಸಿದ ಕ್ಷಣ ಕಣ್ಣಾಲೆಯನ್ನು ಒದ್ದೆಯಾಗಿಸುತ್ತದೆ.
ಸೋದರ ಸೋದರಿಯ ನಡುವಣ ಸಂಬಂಧ ಅದ್ಭುತ,ಪರಿಶುದ್ಧ, ಅಮೂಲ್ಯ, ನಿರ್ಮಲ ಮತ್ತು ನಿಸ್ವಾರ್ಥ ಇನ್ನು ಈ ವಿಡಿಯೋ ನೋಡಿದ ಬಹುತೇಕರು ಭಾವುಕರಾಗಿದ್ದಾರೆ.
PublicNext
30/01/2022 06:39 pm