ವೈರಲ್ ವೀಡಿಯೋಗಳು ಮಜಾನೂ ಕೊಡುತ್ತವೆ. ಯಡವಟ್ಟಿಗೂ ಕಾರಣ ಆಗುತ್ತವೆ. ಪಾಕಿಸ್ತಾನದ ರಾಜಕಾರಣಿ ಬಾಲಿವುಡ್‌ನ ಟಿಪ್ ಟಿಪ್ ಬರ್ಸಾ ಪಾನಿ ಹಾಡಿಗೆ ಕುಣಿದು ಕುಪ್ಪಳ್ಳಿಸಿದ್ದಾರೆ. ಹಾಗಂತಲೇ ಈಗೊಂದು ವೀಡಿಯೋ ವೈರಲ್ ಆಗಿದೆ. ಆದರೆ ಅದರ ಅಸಲಿ ಸತ್ಯ ಬೇರೆನೆ ಇದೆ. ಬನ್ನಿ, ಹೇಳ್ತಿವಿ.
ಸಾಮಾಜಿತ ತಾಣದಲ್ಲಿ ಟಿಪ್ ಟಿಪ್ ಬರ್ಸಾ ಪಾನಿ ಹಾಡಿಗೆ ಪಾಕಿಸ್ತಾನದ ಸಂಸದ ಅಮೀರ್ ಲಿಯಾಖತ್ ಹುಸೇನ್, ಹೀಗೆ ಸಿಕ್ಕಾಪಟ್ಟೆ ಡ್ಯಾನ್ಸ್ ಮಾಡಿದ್ದಾರೆ ಅಂತಲೇ ಟ್ವಿಟರ್ ನಲ್ಲಿ ಈ ವೀಡಿಯೋ ಶೇರ್ ಮಾಡಲಾಗುತ್ತಿತ್ತು.
ಆದರೆ ಅಸಲಿ ಸತ್ಯ ಇದು ಅಲ್ಲೇ ಅಲ್ಲ. ಇಲ್ಲಿ ವೀಡಿಯೋದಲ್ಲಿ ಸಖತ್ ಆಗಿಯೇ ಡ್ಯಾನ್ಸ್ ಮಾಡ್ತಿರೋದು ಕೋರಿಯೋಗ್ರಾಫ್. ಹೆಸರು ಶೋಯೆಬ್ ಶಕೂರ್. ಈ ನೃತ್ಯ ನಿರ್ದೇಶಕರೇ ಇಲ್ಲಿ ಕಾಣಿಸಿಕೊಂಡಿದ್ದಾರೆ. ವೀಡಿಯೋ ನೋಡಿ ಅದ್ಯಾರೋ ತಪ್ಪಾಗಿಯೇ ಗ್ರಹಿಸಿ ಇದು ಸಂಸದ ಅಮರಿ್ ಲಿಯಾಖತ್ ಹುಸೇನ್ ಅಂತಲೇ ಹೇಳಿದ್ದರು.ಈಗ ಅದು ಕ್ಲಿಯರ್ ಆಗಿದೆ. ಕ್ಲಿಯರ್ ಆಗಿರೋ ಸುದ್ದಿನೇ ಮತ್ತೆ ವೈರಲ್ ಆಗುತ್ತಿದೆ.
PublicNext
07/01/2022 12:27 pm