ದೇವರು ಎಲ್ಲೆಡೆ ನಮ್ಮೊಂದಿಗಿರಲು ಸಾಧ್ಯವಿಲ್ಲವೆಂದು ತಾಯಿಯನ್ನು ಸೃಷ್ಟಿಸಿದ್ದಾನೆ. ಅಮ್ಮನ ಅಂಗೈಯಿಂದ ಜಾರುವುದು ಅಷ್ಟು ಸುಲಭವಲ್ಲ. ಕೆಲವೊಮ್ಮೆ ಯಮನನ್ನು ಹೆದರಿಸಿ ಕಂದನನ್ನು ಕಾಯುವಳು ಅಮ್ಮ.
ಸದ್ಯ ವೈರಲ್ ಆದ ವಿಡಿಯೋದಲ್ಲಿ ಬಾಲ್ಕನಿಯಿಂದ ಕೆಳಗೆ ಬೀಳುತ್ತಿದ್ದ ಕಂದನನ್ನು ಕೊದಲೆಳೆ ಅಂತರದಲ್ಲಿ ತಾಯಿ ಕಾಪಾಡಿದ ಪರಿ ನಿಜಕ್ಕೂ ಎದೆ ಧಗ್ ಎನ್ನುವಂತಿದೆ.
memewalanews ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಆಗಿರುವ ವಿಡಿಯೋದಲ್ಲಿ ತಾಯಿಯೊಬ್ಬರ ಸಮಯಪ್ರಜ್ಞೆಯ ದೃಶ್ಯವಿದೆ. ಇವರು ತೋರಿದ ಧೈರ್ಯ, ವೇಗ ಈಗ ಇವರನ್ನು ಎಲ್ಲರು ಹೆಮ್ಮೆಯಿಂದ `ಸೂಪರ್ ಅಮ್ಮ' ಎಂದು ಕರೆಸಿಕೊಳ್ಳುವಂತೆ ಮಾಡಿದೆ.
PublicNext
02/01/2022 12:13 pm