ಕಾಡು ಪ್ರಾಣಿಗಳಲ್ಲಿ ಚಿರತೆ ನಾಡಿಗೆ ಬರ್ತಿರೋದು ಈಗ ಕಾಮನ್ ಆಗಿ ಬಿಟ್ಟಿದೆ. ಊರಲ್ಲಿರೋ ಕೋಳಿ-ಕುರಿ-ಜಾನುವಾರನ್ನ ಈ ಚಿರತೆಗಳು ಕಚ್ಚಿಕೊಂಡು ಹೊತ್ತೊಯ್ದು ಬಿಡುತ್ತವೆ. ಹಸಿವಿನಿಂದ ಮನೆಯಂಗಳದಲ್ಲಿರೋ ನಾಯಿಯನ್ನೂ ಚಿರತೆಗಳು ಬೇಟೆ ಆಡ್ತಿವೆ. ಆದರೆ ಇಲ್ಲೊಂದು ನಾಯಿ ಹಾಗೆ ಚಿರತೆ ದಾಳಿ ಮಾಡಿದಾಗ ಗ್ರೇಟ್ ಎಸ್ಕೇಪ್ ಆಗಿದೆ. ಬನ್ನಿ, ಹೇಳ್ತಿವಿ.
ಕತ್ತಲ ರಾತ್ರಿಯಲ್ಲಿ ಚಳಿಯ ಈ ದಿನಗಳಲ್ಲಿ ಚಿರತೆ ಹಸಿವಿನಿಂದ ಕಪ್ಪು ನಾಯಿ ಮೇಲೆ ಅಟ್ಯಾಕ್ ಮಾಡಿದೆ. ತನ್ನ ಬಾಯಿಯಿಂದ ನಾಯಿಯನ್ನೂ ಕಚ್ಚಿ ಹಿಡಿದಿದೆ. ಆದರೆ ನಾಯಿ ನಿಜಕ್ಕೂ ಡೇರ್ ಡೆವಿಲ್ ಬಿಡಿ. ಕೊಂಚವೂ ಭಯಪಟ್ಟಿಲ್ಲ. ಚಿರತೆಯ ಹಿಡಿತದಿಂದ ತಪ್ಪಿಸಿಕೊಳ್ಳಲು ಹರಸಾಹಸ ಮಾಡಿದೆ.
ಕೊನೆಗೆ ಅದೇನ್ ಆಯಿತೋ ಏನೋ. ಚಿರತೆ ಹಿಡಿತವನ್ನ ಸಡಿಲುಗೊಳಿಸಿತ್ತೋ ಇಲ್ಲವೇ ನಾಯಿಯ ಶಕ್ತಿ ಹೆಚ್ಚಾಯಿತೋ ಗೊತ್ತಿಲ್ಲ. ನಾಯಿ ಚಿರತೆ ಹಿಡಿತದಿಂದ ತಪ್ಪಿಸಿಕೊಂಡಿದೆ. ಆ ಕ್ಷಣವೇ ಚಿರತೆ ಒಂದು ಕಡೆಗೆ ಓಡಿ ಹೋಗಿದೆ. ಮತ್ತೊಂದು ಕಡೆಗೆ ನಾಯಿ ಓಡಿದೆ. ಈ ಒಂದು ಘಟನೆ ಅದ್ಯಾವ ಕ್ಯಾಮರಾದಲ್ಲಿ ಸೆರೆ ಆಗಿದಿಯೋ ಏನೋ. ಅದ್ಯಾರು ಧೈರ್ಯ ಮಾಡಿ ದೃಶ್ಯ ಕ್ಯಾಪ್ಚರ್ ಮಾಡಿದ್ರೋ ಗೊತ್ತಿಲ್ಲ. ಆದರೆ ವೀಡಿಯೋ ವೈರಲ್ ಆಗುತ್ತಿದೆ. ಮೈಸೂರು ಭಾಗದಲ್ಲಿಯೇ ಈ ಘಟನೆ ಆಗಿರೋದು ಅನ್ನೋ ಮಾಹಿತಿ ವೀಡಿಯೋ ಸಮೇತ ಸದ್ಯ ಹರಿದಾಡುತ್ತಿದೆ.
PublicNext
30/12/2021 02:33 pm