ಮುಂಬೈ: ಇತ್ತಿಚ್ಚೆಗೆ ಫುಡ್ ಪ್ರಿಯರನ್ನು ಸೆಳೆಯಲು ಹೋಟೆಲ್ ಗಳು ವಿವಿಧ ಬಗೆಯ ಫುಡ್ ಗಳನ್ನು ಪರಿಚಯಿಸುತ್ತಿದ್ದಾರೆ. ಅದರಲ್ಲೂ ಈ ಇಡ್ಲಿ ವಿಷಯದಲ್ಲಿ ಸಾಕಷ್ಟು ವೆರೈಟಿಗಳನ್ನು ಪರಿಚಯಿಸಿದ್ದಾರೆ.
ಮಲ್ಲಿಗೆ ಇಡ್ಲಿ, ಐಸ್ ಕ್ಯಾಂಡಿ ಇಡ್ಲಿ, ಪಾವ್ ಇಡ್ಲಿ ಲೀಸ್ಟ್ ಗೆ ಇದೀಗ ಬ್ಲ್ಯಾಕ್ ಇಡ್ಲಿ ಆ್ಯಡ ಆಗಿದೆ. ಸದ್ಯ ನಾಗ್ಪುರದ ರಸ್ತೆ ಬದಿಯ ಅಂಗಡಿಯಲ್ಲಿ ಬ್ಲ್ಯಾಕ್ ಇಡ್ಲಿ ಗ್ರಾಹಕರ ಗಮನ ಸೆಳೆಯುತ್ತಿದ್ದು, ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿವೇಕ್ ಮತ್ತು ಆಯೇಶಾ ಎಂಬವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಾಗ್ಪುರದ ಬೀದಿಬದಿಯಲ್ಲಿರುವ ಆಲ್ ಅಬೌಟ್ ಇಡ್ಲಿ ಎಂಬ ಅಂಗಡಿಯಲ್ಲಿ ಈ ಬ್ಲ್ಯಾಕ್ ಇಡ್ಲಿ ದೊರೆಯುತ್ತದೆ.
PublicNext
14/12/2021 02:56 pm