ಆನೆ ಬಂತೊಂದ್ ಆನೆ. ಯಾವೂರ್ ಆನೆ. ಇಲ್ಲಿಗ್ಯಾಕೆ ಬಂತು. ಹಿಂಗೆ ಹೇಳಿ ನಾವೆಲ್ಲ ಖುಷಿ ಪಡ್ತಿದ್ದೇವು. ಆದರೆ ಇಲ್ಲಿರೋ ಒಂದ್ ಆನೆ ಮರಿ ಬಲು ತುಂಟ ಇದೆ. ತನ್ನ ಜೊತೆಗಿರೋ ಮತ್ತೊಂದು ಆನೆಯನ್ನ ನೀರಿಗೆ ತಳ್ಳಿ ಖುಷಿ ಪಟ್ಟಿದೆ. ನೀವೇ ನೋಡಿ.
ಆನೆಗೂ ನೀರಿಗೂ ಏನ್ ಸಂಬಂಧವೋ ಏನೋ.ನೀರು ಕಂಡರೆ ಆನೆಗಳು ಖುಷಿಪಡುತ್ತವೆ. ನೀರಲ್ಲಿಯೇ ಅದೆಷ್ಟೋ ಹೊತ್ತು ಈಜಿ ಸಂತೋಷಪಡುತ್ತವೆ.
ಆದರೆ ಇಲ್ಲಿರೋ ಈ ಪುಟ್ಟ ಆನೆ ಮರಿಗಳಲ್ಲಿ ಒಂದಕ್ಕೆ ನೀರು ಅಂದ್ರೆ ಆಗೋದೇ ಇಲ್ಲ ಅನಿಸುತ್ತದೆ. ಅದಕ್ಕೇನೆ ಮತ್ತೊಂದು ಆನೆ ಈ ಆನೆಯನ್ನ ನೀರಿಗೆ ತಳ್ಳಿದೆ. ಇದನ್ನ ಕಂಡ ಜನ ಕೂಡ ಕೇಕೆ ಹಾಕಿದ್ದಾರೆ. ಅದೇ ವೀಡಿಯೋ ಈಗ ವೈರಲ್ ಆಗುತ್ತಿದೆ.
PublicNext
21/11/2021 06:41 pm