ಈಜಿಪ್ತ್: ಇಲ್ಲಿಯ ಕೈರೋದಲ್ಲಿ ಒಂದು ವಿಶೇಷ ಮಸಾಜ್ ಇದೆ. ಇದನ್ನ ಹುಡುಗಿಯರೇ ಇಲ್ಲಿ ಮಾಡ್ತಾರೆ ಅನ್ಕೋಬೇಡಿ. ಇದು ವಿಶೇಷ ಜೀವಿಯಿಂದ ನಡೆಯೋ ವಿಶೇಷ ಮಸಾಜ್.ಇದರ ಬಗ್ಗೆ ಹೆಚ್ಚು ಹೇಳೋದಕ್ಕಿಂತಲೂ ನೋಡೋದೇ ಲೇಸು. ಬನ್ನಿ, ನೋಡಿ ಬರೋಣ.
ಇದು ಸ್ನೇಕ್ ಮಸಾಜ್ ಸೆಂಟರ್. ಈಜಿಪ್ತ್ ನ ಕೈರೋದಲ್ಲಿಯೇ ಇದೆ. ಸ್ನೇಕ್ ಮಸಾಜ್ ಅಂದ್ರೆ ಇಲ್ಲಿ ಮನುಷ್ಯರೇ ಮನುಷ್ಯರ ಬೆನ್ನಿನ ಮೇಲೆ ಹಾವು ಬಿಡೋದೇ ಈ ಮಸಾಜ್ ಸೆಂಟರ್ ನ ವಿಶೇಷ. ಹಾವು ಕಂಡು ದೂರ ಓಡಿ ಹೋಗುವವರು ಸ್ನೇಕ್ ಮಸಾಜ್ ಸೆಂಟರ್‌ಗೆ ಹೋಗೋದಿಲ್ಲ ಬಿಡಿ.ಆದರೆ ಕೈರೋದ ಈ ಯುವಕ ಸ್ನೇಕ್ ಮಸಾಜ್ ಮಾಡಿಸಿಕೊಂಡಿದ್ದಾರೆ. ಹಲವು ಹಾವುಗಳನ್ನ ಬೆನ್ನಿನ ಮೇಲೆ ಬಿಟ್ಟುಕೊಂಡು ನಿರಾಳವಾಗಿ ಮಲಗಿದ್ದಾನೆ.
ಮಲಗಿದ್ದ ಜಾಗದಿಂದಲೇ ಕ್ಯಾಮೆರಾಗೂ ಅಷ್ಟೇ ನಿರಾಳತೆಯಿಂದ ಮಾತನಾಡಿದ್ದಾನೆ. ಮೊದಲು ಈತನಿಗೂ ಭಯ ಆಗಿದೆ. ಆದರೆ ಯಾವಾಗ ಹಾವುಗಳು ಬೆನ್ನ ಮೇಲೆ ಹರಿದಾಡಿದವೋ ಆಗಲೇ ಈತನಿಗೆ ಒಂದು ವಿಶೇಷ ನೆಮ್ಮದಿ ಸಿಕ್ಕಿದೆ. ಅದನ್ನೆ ಸ್ಥಳೀಯ ಭಾಷೆಯಲ್ಲಿ ಹೀಗೆ ಹೇಳಿದ್ದಾರೆ.ಅಷ್ಟೆ.
PublicNext
20/11/2021 08:46 pm