ನಮ್ಮ ಸಾಕು ನಾಯಿಗಳನ್ನ ನಾವು ತುಂಬಾ ಪ್ರೀತಿಸುತ್ತೇವೆ. ಅವುಗಳಿಗೆ ವಿವಿಧ ಡ್ರೆಸ್ ಗಳನ್ನ ಹಾಕಿ ಖುಷಿನೂ ಪಡುತ್ತವೆ. ಆದರೆ ಇಲ್ಲೊಂದು ನಾಯಿಯ ಓನರ್ ತನ್ನ ನಾಯಿಗೆ ಸಿಂಹದಂತೆ ಕಾಸ್ಟೂಮ್ ಮಾಡಿಸಿದ ಹಾಕಿದ್ದಾರೆ. ಅದನ್ನ ಕಂಡ ಜನ ಒಂದ್ ಅರೆಕ್ಷಣ ದಂಗಾಗಿದ್ದಾರೆ. 05 ಸೆಕೆಂಡ್ ನ ಈ ವೀಡಿಯೋ ಈಗ ವೈರಲ್ ಆಗುತ್ತಿದೆ.
ಪಾರ್ಕ್ ಒಂದರಲ್ಲಿ ಅಚಾನಕ್ಕಾಗಿಯೇ ಈ ಸಿಂಹ ವೇಷಧಾರಿ ನಾಯಿ ಬಂದಿದೆ. ಇದನ್ನ ಕಂಡ ಅಲ್ಲಿದ್ದ ಜನ ಹೌಹಾರಿದ್ದಾರೆ. ಏನಪ್ಪ ಇದು ಇಲ್ಲಿಗೆ ಸಿಂಹ ಬಂದಿದ್ದೇ ಅಂತಲೇ ತಿಳಿದುಕೊಂಡಿದ್ದಾರೆ. ಆದರೆ ಇದು ಸಿಂಹ ಅಲ್ಲ ಇದು ನಾಯಿ ಅಂತ ತಿಳಿದ ಮೇಲೆ ನಿರಾಳ ಆಗಿದ್ದಾರೆ.
ಜನರನ್ನ ಒಂದು ಕ್ಷಣ ಬೆಚ್ಚಿ ಬೀಳಿಸಿದ ಸಿಂಹ ವೇಷಧಾರಿ ನಾಯಿಯ 05 ಸೆಕೆಂಡ್ ನ ಈ ವೀಡಿಯೋ ಈಗ ವೈರಲ್ ಆಗ್ತಾಯಿದೆ. ನೋಡುಗರಿಗೂ ವಿಶೇಷವಾದ ಕ್ರೇಜ್ ಅನ್ನೂ ಇದು ಹುಟ್ಟುಹಾಕುತ್ತಿದೆ.
PublicNext
13/11/2021 02:23 pm