ಈ ಪ್ರಕೃತಿ ಅದೆಷ್ಟು ವಿಸ್ಮಯ ಅಂದ್ರೆ ಮನುಷ್ಯರ ಸಂಶೋಧನೆ ಮತ್ತು ಕಲ್ಪನೆ ಇವೆರಡಕ್ಕೂ ನಿಲುಕದ್ದು. ಕೇಳಿಸುವ ಕಲ್ಲು ಕೇವಲ ಹಂಪಿಯಲ್ಲಷ್ಟೇ ಅಲ್ಲ. ಇಲ್ಲಿಯೂ ಇದೆ.
ಗದಗ ಜಿಲ್ಲೆ ರೋಣ ತಾಲೂಕಿನ ಇಟಗಿ ಗ್ರಾಮದ ಭೀಮಾಂಬಿಕೆ ದೇವಿ ಗುಡಿ ಹತ್ತಿರ ಇರುವ ಈ ಎರಡು ಕಲ್ಲುಗಳು ಗಂಟೆಯಂತೆ ನಾದ ಹೊರಡಿಸುತ್ತವೆ. ದೇವಸ್ಥಾನಕ್ಕೆ ಬರುವ ಭಕ್ತರು ಈ ವಿಸ್ಮಯ ಕಲ್ಲುಗಳನ್ನು ನೋಡಿ ಆಶ್ಚರ್ಯಚಕಿತಗೊಳ್ಳುತ್ತಿದ್ದಾರೆ. ಇನ್ನೂ ಕೆಲ ಭಕ್ತರು ಇದು ಜಾಗದ ಮಹಿಮೆ ಎನ್ನುತ್ತಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.
PublicNext
07/11/2021 01:16 pm