ಮಳೆಗಾಲದಲ್ಲಿ ಹಾವುಗಳು ಹೆಚ್ಚು ಆ್ಯಕ್ಟಿವ್ ಆಗಿರುತ್ತವೆ. ನಮ್ಮಂತೆ ಅವು ಕೂಡ ಮಳೆ ಬಂದಾಗ ತಮ್ಮನ್ನು ತಾವು ಮಳೆಯಲ್ಲಿ ನೆನೆಯದಂತೆ ರಕ್ಷಿಸಿಕೊಳ್ಳಲು ಇಚ್ಚಿಸುತ್ತವೆ.
ವೈರಲ್ ಆಗ್ತಾ ಇರುವ ಈ ವಿಡಿಯೋದಲ್ಲಿ ಸ್ಕೂಟಿಯ ಹೆಡ್ಲೈಟ್ ಹಿಂಭಾಗದಲ್ಲಿ ನಾಗರಹಾವೊಂದು ಬೆಚ್ಚಗೆ ಕುಳಿತಿದೆ. ಉರಗ ರಕ್ಷಕರೊಬ್ಬರು ಈ ಹಾವನ್ನು ಹಿಡಿದಿದ್ದಾರೆ. ಮಳೆಗಾಲದಲ್ಲಿ ಹೀಗೆ ಹಾವುಗಳು ಇಂತಹ ಆಯಕಟ್ಟಿನ ಜಾಗದಲ್ಲಿ ಬರಬಹುದು. ನೀವೂ ಹುಷಾರಾಗಿರಿ.
PublicNext
07/09/2021 09:20 pm