ವಿಶ್ವದ ಬೃಹತ್ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದ ತುತ್ತ ತುದಿಯಲ್ಲಿ ಎಮಿರೇಟ್ಸ್ ಕ್ಯಾಬಿನ್ ಸಿಬ್ಬಂದಿಯ ಸಮವಸ್ತ್ರ ತೊಟ್ಟು ಮಹಿಳೆಯೊಬ್ಬರು ನಿಂತಿದ್ದು, ಈ ದೃಶ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದೆ.
ಬುರ್ಜ್ ಖಲೀಫಾದ ತುತ್ತ ತುದಿಯಲ್ಲಿ ಮಹಿಳೆ ನಿಂತಿರುವ ದೃಶ್ಯದ ಮೂಲಕ ದುಬೈ ಮೂಲದ ಎಮಿರೇಟ್ಸ್ ವಿಮಾನಯಾನ ಸಂಸ್ಥೆ ತನ್ನ ಜಾಹೀರಾತನ್ನು ಈಗ ಇನ್ನೊಂದು ಎತ್ತರಕ್ಕೆ ಕೊಂಡೊಯ್ದಿದೆ.
ಈ ಮಹಿಳೆ ಕೇವಲ 1.2 ಮೀಟರ್ ಕಡಿಮೆ ಸುತ್ತಳತೆಯ ಜಾಗದಲ್ಲಿ ನಿಂತಿರುವುದು ವಿಶೇಷ.
ಎಮಿರೇಟ್ಸ್ ಕ್ಯಾಬಿನ್ ಸಿಬ್ಬಂದಿಯ ಸಮವಸ್ತ್ರ ಧರಿಸಿದ್ದ ಈ ಮಹಿಳೆ ಸ್ಕೈಡೈವಿಂಗ್ ಬೋಧಕಿಯಾಗಿದ್ದಾರೆ.
PublicNext
11/08/2021 10:00 pm