ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೀವ ಸಂಕುಲಕ್ಕೆ ತಾಯಿಯೇ ಮೊದಲ ಗುರು : ಮಾತೃ ಹೃದಯಿ ಮಂಗ

ತಾಯಿ ಶ್ರೀಮಂತೆಯಾಗಿರಲಿ ಅಥವಾ ಬಡವಿಯಾಗಿರಲಿ, ತನ್ನ ಮಗುವಿಗೆ ಆಕೆಯೇ ಮೊದಲ ಗುರು. ಆಕೆಯ ಆರೈಕೆಯಲ್ಲೇ ಮಗು ಎಲ್ಲವನ್ನು ಕಲಿಯುತ್ತಾ ಬೆಳೆಯುತ್ತದೆ.

ಮನುಷ್ಯರ ಹಾಗೆ ಪ್ರಾಣಿಗಳು ಸಹ ತಮ್ಮ ಸಂತಾನವನ್ನು ಅಷ್ಟೇ ಆರೈಕೆಯಿಂದ, ಪ್ರೀತಿ-ಕರುಣೆ, ವಾತ್ಸಲ್ಯದಿಂದ ಬೆಳಸುತ್ತವೆ. ಅದಕ್ಕೆ ಪೂರಕವೆನಿಸುವ ವಿಡಿಯೋ ವೈರಲ್ ಆಗಿದೆ.

ಸದ್ಯ ಅರಣ್ಯಾಧಿಕಾರಿ ಸುಶಾಂತ್ ನಂದಾ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ತಾಯಿ ಕೋತಿಯೊಂದು ತನ್ನ ಮಗುವಿಗೆ ಅರಣ್ಯಪ್ರದೇಶದ ಒಂದು ಹೊಂಡದಲ್ಲಿ ಸ್ನಾನ ಮಾಡಿಸುತ್ತಿರುವ ದೃಶ್ಯ ನೆಟ್ಟಿಗರ ಮನಗೆದ್ದಿದೆ.

ಈ ವಿಡಿಯೋ ನೋಡುತ್ತಿದ್ದರೆ, 'ಮಂಗನಿಂದ ಮಾನವ' ಅಂತ ಹೇಳುತ್ತಾರಲ್ಲ… ಅದು ಅಕ್ಷರಶಃ ನಿಜವೆನಿಸುತ್ತದೆ! ನಮ್ಮ ಸಮುದಾಯಗಳ ತಾಯಂದಿರು ಮಕ್ಕಳಿಗೆ ಸ್ನಾನ ಮಾಡಿಸುವ ರೀತಿಯಲ್ಲೇ ಈ ಮಂಗ ತನ್ನ ಮರಿಗೆ ಸ್ನಾನ ಮಾಡಿಸುತ್ತಿದೆ.

Edited By : Shivu K
PublicNext

PublicNext

30/07/2021 10:23 am

Cinque Terre

57.54 K

Cinque Terre

0

ಸಂಬಂಧಿತ ಸುದ್ದಿ