ಬಂಟ್ವಾಳ: ಕಳೆದ ವರ್ಷ ಡಿಸೆಂಬರ್ 30ರಂದು ಮಧ್ಯರಾತ್ರಿ 1 ಗಂಟೆ ವೇಳೆ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯವೊಂದು ಈಗ ವೈರಲ್ ಆಗುತ್ತಿದೆ. ಅದೇನೆಂದರೆ ಬೈಕೊಂದು ಸವಾರನೇ ಇಲ್ಲದೆ ಮಧ್ಯರಾತ್ರಿ ಹೊತ್ತು ತನ್ನಷ್ಟಕೇ ಚಲಿಸುತ್ತದೆ. ಬಂಟ್ವಾಳ ಸಮೀಪ ಪಾಣೆಮಂಗಳೂರಿನಲ್ಲಿ ಈ ಘಟನೆ ನಡೆದಿದೆ ಎಂದು ಹೇಳುವ ವಿಡಿಯೋ ಒಂದು ವಾಟ್ಸಾಪ್ ಗಳಲ್ಲಿ ವೈರಲ್ ಆಗುತ್ತಿದ್ದರೂ ಇದು ಅದೇ ಪ್ರದೇಶದ್ದೇ ಎಂಬುದು ಇನ್ನೂ ಖಚಿತವಾಗಿಲ್ಲ.
ಊರಿನ ಹೆಸರು ಬದಲಾಯಿಸಿಕೊಂಡು ಈ ವಿಡಿಯೋ ಹರಿದಾಡುತ್ತಿದ್ದರೂ ಇದರಲ್ಲಿ ಕಂಡುಬರುವ ದೃಶ್ಯ ಆಶ್ಚರ್ಯ ಹುಟ್ಟಿಸುತ್ತದೆ. ಸ್ಟ್ಯಾಂಡ್ ಹಾಕಿದ ಬೈಕೊಂದರ ಮೇಲೆ ಯಾರೋ ಕುಳಿತು ಎಡಕ್ಕೆ ಚಲಿಸಿದರೆ ಹೇಗಿರುತ್ತದೋ ಹಾಗೆಯೇ ಈ ಬೈಕ್ ಕೂಡ ಯಾರೂ ಇಲ್ಲದೆ ಸ್ವಲ್ಪ ಮುಂದಕ್ಕೆ ಚಲಿಸಿ, ಬಳಿಕ ಎಡಕ್ಕೆ ತಿರುಗಿ ಮಗುಚಿ ಬೀಳುತ್ತದೆ.
PublicNext
28/01/2021 08:19 pm