ನಾವು ಆಧುನಿಕ ಮಂದಿ ಇದೀವಲ್ಲ..ಒಂದು ಸಣ್ಣ ತಂಬಿಗೆಯನ್ನ ಈ ಕಡೆಯಿಂದ ಎತ್ತಿ ಈ ಕಡೆ ಇಡೋದಕ್ಕೆ ಬೇಸರ ಮಾಡ್ಕೋತೀವಿ. ಆದ್ರೆ ಈ ರಿಯಲ್ ಬಾಹುಬಲಿಯನ್ನ ನೋಡಿ. ಮಣಭಾರದ ಬೈಕನ್ನೇ ತನ್ನ ತಲೆ ಮೇಲೆ ಹೊತ್ತು ಬಸ್ ಏರಿದ್ದಾನೆ.
ನಿಮಗೆಲ್ಲಾ ಶಾಕ್ ಆಯ್ತಲ್ವಾ? ಹೌದು ನಮಗೂ ಶಾಕ್ ಆಯ್ತು. ನಿಜವಾಗ್ಲೂ ಅಪ್ಪಟ ಮಣ್ಣಿನ ಮಗ ಅಂದ್ರೆ, ಎಂಟೆದೆಯ ಬಂಟ ಅಂದ್ರೆ ಇವರೇ ಕಣ್ರೀ. ಮೈಯಲ್ಲಿ ಅದೆಂತಾ ತಾಕತ್ತಿರಬಹುದು.. ಈಗಾಗಾಲೇ ಟ್ವಿಟ್ಟರ್ ಸೇರಿದಂತ ಇನ್ನಿತರ ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಇದನ್ನ ನೋಡಿದ ಟೆಕ್ಕಿಗಳು, ನೆಟ್ಟಿಗರು ಮತ್ತೆ ಮತ್ತೆ ನೋಡಿ ಇದು ನಿಜಾನಾ ಅಲ್ವಾ ಅಂತಾ ತಲೆ ಕೆರೆದುಕೊಳ್ಳುತ್ತಿದ್ದಾರೆ. ಭಾರೀ ತುರುಸಿನ ಚರ್ಚೆ ನಡೆಸಿದ್ದಾರೆ. ಈತನ ಶ್ರಮದ್ಯೋತಕ ಸಾಹಸಕ್ಕೆ ನಾವೆಲ್ಲ ಶಭಾಷ್ ಎನ್ನಲೇಬೇಕು.
ಏನೇ ಆದ್ರೂ ಈ ಬೈಕ್ ಹೊತ್ತ ಗಂಡಸಿಗೆ ಈಗ ಡಿಮ್ಯಾಂಡಪ್ಪೋ ಡಿಮ್ಯಾಂಡು..
PublicNext
26/01/2021 09:04 pm