ನಾವು ಕೇಳದೆ ಅಮ್ಮ ಅಥವಾ ಉಡುಗೊರೆ ಕೊಟ್ಟರೆ ಅದರಲ್ಲಿ ಸಿಗುವ ಸಂತಸ ಹೇಳತೀರದಷ್ಟು. ಇಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಶೇಷವೆಂದರೆ ತಾಯಿಯೊಬ್ಬಳು ತನ್ನ ಸಾಕು ಮಗಳ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದ್ದಾರೆ. ಗಿಫ್ಟ್ ನೋಡಿದ ಯುವತಿಯು ಆನಂದಬಾಷ್ಪ ಸುರಿಸಿದ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.
ಎಲಿಜಬೆತ್ ಫ್ರೀಡ್‌ಲ್ಯಾಂಡ್ ಎಂಬವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಜನವರಿ 11ರಂದು ಈ ಅಪೂರ್ವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ `ಟಿಶ್ಯೂಗಳನ್ನು ಹತ್ತಿರ ಇಟ್ಟುಕೊಳ್ಳಿ, ಅಳುವುದಕ್ಕೆ ಸಿದ್ಧರಾಗಿ. ನನ್ನ ಅದ್ಭುತ 'ಬೋನಸ್' ಪುತ್ರಿಗೆ ಇಂದು 18 ವರ್ಷ ತುಂಬಿದೆ. ಅವರಿಗೆ ಕಾರು ಉಡುಗೊರೆ ನೀಡಲಾಯಿತು' ಎಂದು ಬರೆದುಕೊಂಡಿದ್ದಾರೆ.
ಈ ಉಡುಗೊರೆಯಿಂದ ಭಾವುಕವಾದ ಮಗಳನ್ನು ತಾಯಿ ತಬ್ಬಿಕೊಂಡ ದೃಶ್ಯ ಅದ್ಭುತವಾಗಿದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.
PublicNext
15/01/2021 08:22 pm