ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರಿಗೆ ಬೆಂಕಿ ಹತ್ತಿದ ಒಂದೇ ಕ್ಷಣದಲ್ಲಿ ಅಗ್ನಿಶಾಮಕ ದಳ ಎಂಟ್ರಿ...!

ವಾಹನ, ಮನೆಗೆ ಏಕಾಏಕಿ ಬೆಂಕಿ ತಗುಲಿ ಹೊತ್ತಿ ಉರಿಯುವಾಗ ನಮಗೆ ತಕ್ಷಣವೇ ನೆನಪಿಗೆ ಬರುವುದು ಅಗ್ನಿಶಾಮಕ ದಳ. ಟ್ರಾಫಿಕ್‌, ರಸ್ತೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಅಗ್ನಿಶಾಮಕ ದಳವು ಘಟನಾ ಸ್ಥಳಕ್ಕೆ ತಲುಪುವುದು ತಡವಾಗುತ್ತದೆ. ಆದರೆ ಕಾರಿಗೆ ಬೆಂಕಿ ಹತ್ತಿದ ಕೆಲವೇ ಕ್ಷಣದಲ್ಲಿ ಅಗ್ನಿಶಾಮಕದಳ ಕಾರ್ಯಾಚರಣೆ ನಡೆಸಿ ಅನಾಹುತ ತಪ್ಪಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆಗಿದ್ದೇನು ಗೊತ್ತಾ..?

ವೃತ್ತದಲ್ಲಿ ರೆಡ್‌ ಸಿಗ್ನಲ್ ಬಿದ್ದಿದ್ದರಿಂದ ಕಾರು ನಿಲ್ಲುತ್ತದೆ. ಆದರೆ ಗ್ರೀನ್ ಸಿಗ್ನಲ್‌ ಬಿದ್ದರೂ ಕಾರು ಮುಂದೆ ಹೋಗದಿದ್ದಾಗ ಅಗ್ನಿಶಾಮಕದಳದ ವಾಹನ ಅದನ್ನು ದಾಟಿ ಮುಂದೆ ಬರುತ್ತದೆ. ಈ ವೇಳೆ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಳ್ಳುತ್ತದೆ. ಕಾರಿನಲ್ಲಿದ್ದವರು ತಕ್ಷಣವೇ ಹೊರಗೆ ಬರುತ್ತಾರೆ. ಇತ್ತ ಕಾರ್ಯಪ್ರವೃತ್ತರಾದ ಅಗ್ನಿಶಾಮಕದಳವು ಬೆಂಕಿಯನ್ನು ನಂದಿಸಿದೆ.

ಈ ದೃಶ್ಯವು ಸ್ಥಳದಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲ ನೆಟ್ಟಿಗರು ''ಅಗ್ನಿಶಾಮಕ ದಳ ಸಕಾಲದಲ್ಲಿ ಘಟನಾ ಸ್ಥಳಕ್ಕೆ ಬಂದಿದೆ'' ಎಂದು ಕಮೆಂಟ್ ಮಾಡಿದ್ದಾರೆ.

Edited By : Manjunath H D
PublicNext

PublicNext

09/01/2021 03:54 pm

Cinque Terre

59.44 K

Cinque Terre

1

ಸಂಬಂಧಿತ ಸುದ್ದಿ