ಸಾಧನೆಗೆ ವಯಸ್ಸು ಕೇವಲ ಸಂಖ್ಯೆ ಏನ್ನನಾದರೂ ಸಾಧಿಸುವೇ ಎನ್ನುವ ಅಚಲವಾದ ನಂಬಿಕೆ ಜೊತೆಗಿದ್ರೆ ಯಾವ ವಯಸ್ಸಿನಲ್ಲಾದ್ರು ಸಾಧನೆಯ ಶಿಖರವನ್ನೇರಬಹುದು ಎನ್ನುವುದುಕ್ಕೆ ಈ 71 ರ ಹರೆಯದ ಹಿರಿಯರೇ ಸಾಕ್ಷಿ.
ವಯಸ್ಸಿನ ಹಂಗಿಲ್ಲದೆ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಮಾದರಿಯಾದ ಹಿರಿಯರು ಅನೇಕರು.ಹಿರಿಯರು ವಯಸ್ಸಾದಂತೆಯೇ ಮೊಮ್ಮಕ್ಕಳೊಂದಿಗೆ ಆಟವಾಡುವುದು ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಬ್ಯುಜಿಯಾಗತ್ತಾರೆ.
ಇನ್ನೊಂದಷ್ಟು ಹಿರಿಯರು ಫಿಟ್ನೆಸ್ ಬಗ್ಗೆ ತುಸು ಹೆಚ್ಚು ಆಸಕ್ತಿ ವಹಿಸುತ್ತಾರೆ.
ಇವರ ಫಿಟ್ನೆಸ್ ಪ್ರೀತಿ ನಿಜಕ್ಕೂ ಗಮನ ಸೆಳೆಯುತ್ತದೆ. ಅಂತಹ ಸಾಧಕರಲ್ಲಿ ಇವರು ಕೂಡಾ ಇಬ್ಬರು ರೂಡಿ ಕಡ್ಲಬ್ ಎಂಬ ಸಾಧಕ ಈಗ ತಮ್ಮ ಫಿಟ್ನೆಸ್ ಪ್ರೀತಿಯಿಂದಲೇ ಗಮನ ಸೆಳೆದಿದ್ದಾರೆ. 71 ವರ್ಷದ ರೂಡಿ ಆರೋಗ್ಯದಿಂದಿರಲು ಸದಾ ದೈಹಿಕ ಕಸರತ್ತಿನತ್ತ ಶ್ರಮವಹಿಸುತ್ತಾರೆ.
ಈ ಹರೆಯದಲ್ಲೂ ವೇಯ್ಟ್ ಲಿಫ್ಟಿಂಗ್ ನಲ್ಲಿ ಕಳೆದ ನವೆಂಬರ್ ನಲ್ಲಿ ಸ್ಯಾನ್ ಡಿಯಾಗೋದಲ್ಲಿ ನಡೆದ ಯುಎಸ್ ಪಿಎ ನಾರ್ತ್ ಅಮೇರಿಕನ್ ಚಾಂಪಿಯನ್ ಶಿಪ್ ನಲ್ಲಿ ಕಡ್ಲಬ್ ಪವರ್ ಲಿಫ್ಟಿಂಗ್ ನಲ್ಲಿ ನಾಲ್ಕು ವಿಶ್ವ ದಾಖಲೆಯನ್ನು ನಿರ್ಮಿಸಿ ಯಶಸ್ವಿಯಾಗಿದ್ದಾರೆ.
ಹಾಗಂತ, ಇವರು ಬಹುಕಾಲದಿಂದ ಲಿಫ್ಟಿಂಗ್ ನಲ್ಲಿ ಅಭ್ಯಾಸ ಮಾಡಿದವರಲ್ಲ.
ಅಭ್ಯಾಸ ಆರಂಭಿಸಿದ್ದೇ 55ನೇ ವಯಸ್ಸಿನಲ್ಲಿ ಎಂಬುವುದೇ ಅಚ್ಚರಿ ಸಂಗತಿ ನಿಶ್ಚಿತ ಗುರಿಯತ್ತ ಸತತ ಶ್ರಮವಹಿಸಿ ಮುನ್ನಡೆದ ಕಡ್ಲಬ್ ತಮ್ಮ ಸಾಧನೆಯ ಪಯಣದ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾರೆ. ಇವರ ಸಾಧನೆಯ ಪಯಣದ ವಿಡಿಯೋಗಳು ಈಗ ಎಲ್ಲರ ಗಮನ ಸೆಳೆದಿವೆ.
PublicNext
06/01/2021 02:18 pm