ನಮ್ಮ ಜನ ಕೆಲವು ಸಂದರ್ಭಗಳಲ್ಲಿ ಮಾಡುವ ಹುಚ್ಚಾಟಗಳು ನೋಡುಗರ ಎದೆಯಲ್ಲಿ ನಡುಕ ಹುಟ್ಟಿಸುವಂತಿರುತ್ತವೆ.ಕೊಂಚ ಯಾಮಾರಿದ್ರು ಯಮನಪಾದವೇ ಗತಿಯಾಗುವಂತ ಘಟನೆಗಳು ಕಣ್ಣ ಮುಂದೆಯೇ ನಡೆಯುತ್ತಿರುತ್ತವೆ.ಸದ್ಯ ವೈರಲ್ ಆದ ವಿಡಿಯೋದಲ್ಲಿ ಮುಂಬೈ ಪೊಲೀಸ್ ಪೇದೆಯೊಬ್ಬರು ನೆಟ್ಟಿಗರ ಪಾಲಿನ ಹೀರೋ ಆಗಿದ್ದಾರೆ.
60 ವರ್ಷದ ಗಣ್ಪತ್ ಸೋಲಂಕಿ ಎಂಬ ವ್ಯಕ್ತಿ ಬ್ಯಾರಿಕೇಡ್ ದಾಟಿಕೊಂಡು ರೈಲು ಹಳಿ ದಾಟುತ್ತಿದ್ದ ವೇಳೆ ಶೂ ಕಳಜಿ ಬಿದ್ದಿದೆ.ಶೂ ಎತ್ತಿಕೊಳ್ಳಲು ಹಳಿಯ ಮತ್ತೊಂದು ಬದಿಗೆ ಸರಿದಾಗ ಅಲ್ಲಿಯೇ ಇದ್ದ ರೈಲ್ವೇ ಸಿಬ್ಬಂದಿಯೊಬ್ಬರ ಕಣ್ಣಿಗೆ ಬಿದ್ದಿದ್ದಾರೆ.
ಆಗ ರೈಲೊಂದು ಬರುತ್ತಿದೆ ಎಂದು ಪೇದೆ ಅವರಿಗೆ ಅಲರ್ಟ್ ಮಾಡಿದ್ದಾರೆ. ಇದಕ್ಕೆ ತಲೆಕೆಡಿಸಿಕೊಳ್ಳದ ಆತ ತನ್ನ ಪ್ಲಾಟ್ ಫಾರ್ಮ್ ಹತ್ತಲು ಮುಂದಾಗಿದ್ದಾನೆ.
ಇನ್ನೇನು ರೈಲು ಬಂದು ಆತನಿಗೆ ಡಿಚ್ಚಿ ಹೊಡೆಯಿತು ಎನ್ನುವಷ್ಟರಲ್ಲಿ ಎಸ್.ಬಿ. ನಿಕಮ್ ಹೆಸರಿನ ಪೇದೆ ಬಂದು ಆತನನ್ನು ಮೇಲಕ್ಕೇತ್ತಿದ್ದಾನೆ.
ಅಷ್ಟೇ ಅಲ್ಲದೆ ಸರಿಯಾಗಿ ಕಪಾಳಮೋಕ್ಷ ಮಾಡಿದ್ದಾರೆ.ಸದ್ಯ ವೈರಲ್ ಆದ ಈ ವಿಡಿಯೋ ಭಾರಿ ಸಂಚಲನ ಸೃಷ್ಠಿಸಿದೆ.
PublicNext
06/01/2021 08:13 am