ಸಾಮಾನ್ಯವಾಗಿ ನದಿ,ಹೊಂಡ,ಸಮುದ್ರಕ್ಕೆ ಬಿದ್ದ ಕಾರುಗಳು ಮುಳುಗುವುದು ಎಲ್ಲರಿಗೂ ತಿಳಿದಿರುವ ಸತ್ಯ.
ಆದ್ರೆ ಇಲ್ಲೊಂದು ಕಾರು ಸಮುದ್ರದ ಪಾಲಾದ್ರು ತೇಲುವ ಮೂಲಕ ಅಚ್ಚರಿಗೆ ಕಾರಣವಾಗಿದೆ. ಡಿಸೆಂಬರ್ ತಿಂಗಳಾಂತ್ಯದಲ್ಲಿ ಬಹುತೇಕರು ಪಾರ್ಟಿ ಮೂಡ್ ನಲ್ಲಿರುತ್ತಾರೆ.
ಹೊಸ ವರ್ಷದ ಸ್ವಾಗತಕ್ಕೆ ಎಲ್ಲರೂ ಸಜ್ಜಾಗುತ್ತಿರುತ್ತಾರೆ. ಆದರೆ, ಕೆಲವರು ಬೀಚ್ ಗೂ ಹೋಗಿ ಎಂಜಾಯ್ ಮಾಡುತ್ತಾರೆ ಈ ವೇಳೆ ಕೆಲವು ಅವಘಡಗಳು ಸಂಭವಿಸುತ್ತವೆ.
ಸದ್ಯ ಮುಂಬೈನ ವಸೈನಲ್ಲಿ ಕಲಾಂಬ್ ಬೀಚ್ ನಲ್ಲಿ ಕಾರೊಂದು ಅರ್ಧ ಮುಳುಗಿತ್ತು. ನೀರಿನಲ್ಲಿ ತೇಲುತ್ತಿದ್ದ ಈ ಕಾರಿನ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲ ಸ್ನೇಹಿತರ ಗುಂಪು ರಾತ್ರಿ ಪಾರ್ಟಿ ಮಾಡಲು ಬೀಚ್ ಗೆ ಬಂದಿದ್ದರು.
ಈ ವೇಳೆ ಬೀಚ್ ನಲ್ಲಿ ದಡದಲ್ಲಿದ್ದ ಕಾರು ಅಲೆಯಬ್ಬರಕ್ಕೆ ಸಮುದ್ರ ಸೇರಿದೆ. ಕಾರು ಕಲಾಂಬ್ ಬೀಚ್ ನಿಂದ ಭೂಗಾಂವ್ ಬೀಚ್ ಗೆ ತಲುಪಿತ್ತು...!
ಮರುದಿನ ಬೆಳಗ್ಗೆ ಇಲ್ಲಿನ ಸ್ಥಳೀಯರು ಅರ್ಧ ಮುಳುಗಿದ ಕಾರು ತೇಲುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಬೀಚ್ ನಿಂದ ಸುಮಾರು 500 ಮೀಟರ್ ದೂರದಲ್ಲಿ ಈ ಕಾರು ತೇಲುತ್ತಿತ್ತು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ವಸೈ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕಾರನ್ನು ಮೇಲಕ್ಕೆತ್ತಿದ್ದಾರೆ. ಇನ್ನು ಬೀಚ್ ನಲ್ಲಿ ವಾಹನ ಓಡಿಸುವುದು ಕಾನೂನು ಬಾಹಿರವಾಗಿದ್ದರಿಂದ ಕಾರಿನ ಮಾಲಿಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
PublicNext
02/01/2021 04:28 pm