ಜೀವ ಜಗತ್ತು ಅತ್ಯಂತ ವಿಸ್ಮಯ. ಅದರ ಬಗ್ಗೆ ನಾವು ತಿಳಿದಷ್ಟು ಕುತೂಹಲ ಹೆಚ್ಚಾಗುತ್ತಲೇ ಇರುತ್ತದೆ. ಆ ಮಟ್ಟಿಗಿನ ವಿಚಿತ್ರ, ವಿಕ್ಷಿಪ್ತ ಸಂಗತಿಗಳು ಅಲ್ಲಿ ನಡೆಯುತ್ತಿರುತ್ತವೆ. ಅದಕ್ಕೆ ಮತ್ತೊಂದು ತಾಜಾ ಹಾಗೂ ಮಸ್ತ್ ಉದಾಹರಣೆ ಇಲ್ಲಿದೆ ನೋಡಿ.
ಚಿರತೆ ಅಂದ್ರೆ ಪರಾಕ್ರಮಿ ಪ್ರಾಣಿ. ಅದರ ಓಟ, ನೆಗೆತ ಕಂಡು ಕೆಲವೊಮ್ಮೆ ಹುಲಿ ಕೂಡ ಬೆಚ್ಚುತ್ತದೆ. ಆದ್ರೆ ಆ ಮಾತು ಇಲ್ಲಿ ಉಲ್ಟಾ ಆಗಿದೆ. ಅದು ಹೇಗೆ ಅಂತ ಹೇಳ್ತೀವಿ ಈ ವಿಡಿಯೋ ಪೂರ್ತಿ ನೋಡಿ. ಚಿರತೆಯೊಂದು ಬಾಯಾರಿಸಿಕೊಳ್ಳಲು ನದಿಗೆ ಬಂದು ತುದಿಗಾಲಲ್ಲೇ ತಟದಲ್ಲಿ ನೀರು ಕುಡಿಯುತ್ತಿದೆ.
ಆಗ ಹೊಂಚು ಹಾಕಿ ಕೊಂಚವೂ ಸುಳಿವು ಸಿಗದಂತೆ ಅಲ್ಲಿಗೆ ಬಂದ ಮೊಸಳೆ ಕ್ಷಣಾರ್ಧದಲ್ಲೇ ಗಬಕ್ಕನೇ ಚಿರತೆಯ ಕೊರಳಿಗೆ ಬಾಯಿ ಹಾಕಿದೆ. ಅಷ್ಟೇ ಅಲ್ಲ, ಚಿರತೆ ಅದೆಷ್ಟೇ ಕೊಸರಾಡಿಕೊಂಡು ಮೈ ಕೊಡವಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಮೊಸಳೆಯ ಬಾಯಿಯ ಬಿಗಿ ಹಿಡಿತದಿಂದ ತಪ್ಪಿಸಿಕೊಳ್ಳಲಾಗಿಲ್ಲ.
ಚಿರತೆಯನ್ನು ಅಲ್ಲಿಂದ ಸೀದಾ ನೀರಿನಾಳಕ್ಕೆ ಮೊಸಳೆ ಎಳೆದೊಯ್ದಿದೆ. ಈಗ ಹೇಳಿ! ಚಿರತೆ ಶಕ್ತಿಶಾಲಿ ಪರಾಕ್ರಮಿ ಇದ್ದರೂ ಮೊಸಳೆ ಬಾಯಿಯ ಹಿಡಿತ ಅದಕ್ಕಿಂತಲೂ ಪವರ್ ಫುಲ್ ಅನ್ನೋದು ಇದ್ರಿಂದ ಸಾಬೀತಾಯ್ತು ಅಲ್ಲವೇ?
PublicNext
06/12/2020 05:15 pm