ವಿಜಯನಗರ: ಹೂವಿನಹಡಗಲಿ ತಾಲೂಕು ಮೈಲಾರದಲ್ಲಿ ಬಡವರಿಗೆ ನೀಡಲಾಗುವ ಪಡಿತರ ಧಾನ್ಯ ತೀರಾ ಕಳಪೆಯಾಗಿದೆ. ನ್ಯಾಯಬೆಲೆ ಅಂಗಡಿಯವರು ಅದನ್ನೇ ಬಡಜನರಿಗೆ ವಿತರಿಸುತ್ತಿದ್ದಾರೆ.
ಶ್ರೀ ಮೈಲಾರಲಿಗೆಶ್ವರ ಎಂಬ ಹೆಸರಿನ ನ್ಯಾಯಬೆಲೆ ಅಂಗಡಿ ಇದಾಗಿದ್ದು, ಅಕ್ಕಮ್ಮ ಹರವಿ ಎಂಬುವವರ ಹೆಸರಿಗೆ ಸೇರಿದೆ.
ಜೋಳ ಇಷ್ಟೊಂದು ಕಳಪೆಯಾಗಿದ್ದರೂ ಅಧಿಕಾರಿಗಳು ಅದನ್ನೇ ವಿತರಣೆ ಮಾಡುವಂತೆ ಸೂಚಿಸಿದ್ದಾರೆ ಎಂದು ನ್ಯಾಯಬೆಲೆ ಅಂಗಡಿವರು ಹೇಳುತ್ತಿದ್ದಾರೆ. ಇಲ್ಲಿಗೆ ಸರಬರಾಜು ಆದ ಒಟ್ಟು 150ಚೀಲಗಳು ಇದೇ ರೀತಿ ಕಳಪೆಯಾಗಿವೆ.
ಏನು ಮಾಡೋದು ರೀ ಸರಕಾರ ಬಡವರ ಆರೋಗ್ಯದ ಜೊತೆ ಆಟ ಆಡುತ್ತಿದೆ ಇಂತಹ ಪದಾರ್ಥ ತಿಂದು ನಾವು ಹೇಗೆ ಜೀವಿಸಬೇಕು? ಇದನ್ನು ತಿಂದ ನಮ್ಮ ಆರೋಗ್ಯದ ಗತಿ ಏನಾಗಬೇಕು? ನಮ್ಮಂತ ಬಡವರ ಗೋಳು ಯಾರು ಕೇಳುತ್ತಾರೆ ಎಂದು ಪಡಿತರ ಪಡೆದ ಜನಸಾಮಾನ್ಯರು ಸರಕಾರವನ್ನು ಬೈದು ಕೊಂಡು ಹೋಗುತ್ತಿದ್ದಾರೆ. ಆದಷ್ಟು ಬೇಗ ಎಚ್ಚೆತ್ತುಕೊಂಡು ಅಧಿಕಾರಿಗಳು ಕಳಪೆ ಪಡಿತರ ನೀಡೋದನ್ನ ನಿಲ್ಲಿಸಿ, ಗುಣಮಟ್ಟದ ಪಡಿತರ ಕೊಡಬೇಕು ಅನ್ನೋ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿ ಬರ್ತಿದೆ.
PublicNext
21/01/2025 04:57 pm