ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಸ್‌ಪಿ ಡಾ.ಪೆನ್ನೇಕರ್ ವರ್ಗಾಯಿಸದಂತೆ ಜಗದೀಪ್ ತೆಂಗೇರಿ ಆಗ್ರಹ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲಾ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಿ, ಜಿಲ್ಲೆಯಲ್ಲಿ ಸಾರ್ವಜನಿಕರು ಶಾಂತಿ, ನೆಮ್ಮದಿಯಿಂದ ಇರಲು ಹಗಲು- ರಾತ್ರಿ ಪರಿಶ್ರಮಿಸಿದ ದಕ್ಷ ಮತ್ತು ಪ್ರಾಮಾಣಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಅವರನ್ನು ಜಿಲ್ಲೆಯಿಂದ ವರ್ಗಾಯಿಸದಂತೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್.ತೆಂಗೇರಿ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಸುಮನ ಪೆನ್ನೇಕರ್ ಅವರು ಓರ್ವ ಮಹಿಳೆಯಾಗಿ, ಯಾರಿಗೂ ಅಂಜದೇ ಜಿಲ್ಲೆಯಲ್ಲಿ ಕಾನೂನು ಮತ್ತು ಶಿಸ್ತು ಪಾಲನೆ ಮಾಡುತ್ತಿರುವುದನ್ನು ಜಿಲ್ಲೆಯ ಜನ ಮೆಚ್ಚಲೇ ಬೇಕು. ಇಂತಹ ದಕ್ಷ ಅಧಿಕಾರಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅನೇಕ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದರಿಂದ, ಅನೇಕ ಸಮಾಜ ದ್ರೋಹಿಗಳನ್ನು ಎದುರು ಹಾಕಿಕೊಳ್ಳುವಂತಾಯಿತು. ಈ ರೀತಿಯ ಸಮಾಜ ದ್ರೋಹಿಗಳೊಂದಿಗೆ, ಸಮಾಜದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮತ್ತು ರಾಜಕಾರಣಿಗಳು ಕೈಜೋಡಿಸಿ ಅವರನ್ನು ಸರಕಾರದ ಮಟ್ಟದಲ್ಲಿ ಜಿಲ್ಲೆಯಿಂದ ವರ್ಗಾಯಿಸಲು ಮುಂದಾಗಿರುವುದು ತೀರಾ ವಿಷಾದನೀಯ ಸಂಗತಿ ಎಂದು ಹೇಳಿದ್ದಾರೆ.

ದಕ್ಷ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪನ್ನೇಕರ್ ಅವರ ಪ್ರಾಮಾಣಿಕ ಸೇವೆ ಉತ್ತರ ಕನ್ನಡ ಜಿಲ್ಲೆಗೆ ತೀರಾ ಅವಶ್ಯಕತೆ ಇದ್ದು, ಅವರನ್ನು ಜಿಲ್ಲೆಯಿಂದ ಯಾವುದೇ ಕಾರಣಕ್ಕೂ ವರ್ಗಾಯಿಸದಂತೆ ತೆಂಗೇರಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

27/09/2022 03:59 pm

Cinque Terre

2.26 K

Cinque Terre

0

ಸಂಬಂಧಿತ ಸುದ್ದಿ